ಕಾಕೋಟುಪರಂಬು (ವೀರಾಜಪೇಟೆ), ಏ. 25: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗು ಪ್ರೌಢಶಾಲಾ ಮೈದಾನದಲ್ಲಿ ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಬೊಟ್ಟೋಳಂಡ, ಪೆಮ್ಮಂಡ, ಮುಕ್ಕಾಟ್ಟಿರ, ನಾಗಂಡ, ಐನಂಡ, ಮಚ್ಚಾರಂಡ, ಬಿದ್ದಾಟಂಡ, ನಾಮೆರ, ಕಂಬಿರಂಡ, ಬಯವಂಡ, ಕಂಗಂಡ, ಮೇರಿಯಂಡÀ ತಂಡಗಳು ಮುನ್ನಡೆ ಸಾಧಿಸಿದೆ.

ಮ್ಯೆದಾನ 1 ರಲ್ಲಿ ನಡೆದ ಪಂದ್ಯದಲ್ಲಿ ಕುಂದಿರ ತಂಡ ಬಾರದ ಕಾರಣ ಆಯೋಜಕರು ಬೊಟ್ಟೋಳಂಡ ತಂಡವನ್ನು ವಿಜಯಿ ಎಂದು ಘೋಷಿಸಿದರು.

ಪೆಮ್ಮಂಡ ತಂಡವು 4-0 ಗೋಲುಗಳಿಂದ ತಾಪಂಡ ತಂಡವನ್ನು ಪರಾಭವಗೊಳಿಸಿತು. ಪೆಮ್ಮಂಡ ಪರ ಬೋಪಣ್ಣ (3ನಿ), ಸೋಮಣ್ಣ (16,30ನಿ), ಪೊನ್ನಣ್ಣ (19ನಿ)ದಲ್ಲಿ ಗೋಲು ಬಾರಿಸಿದರು.

ಮುಕ್ಕಾಟ್ಟಿರ (ಕಡಗದಾಳು) ತಂಡವು ಶಾಂತೇಯಂಡ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಮುಕ್ಕಾಟ್ಟಿರ ಪರ ನಾಣಯ್ಯ (13ನಿ), ಕಾವ್ಯ (29ನಿ), ಶಾಂತೆಯಂಡ ಪರ ತಿಮ್ಮಯ್ಯ (39ನಿ)ದಲ್ಲಿ ಗೋಲು ಬಾರಿಸಿ ಗೋಲಿನ ಅಂತರವನ್ನು ಕಡಿಮೆಗೊಳಿಸಿದರು.

ನಾಗಂಡ ತಂಡವು 3-0 ಗೋಲುಗಳಿಂದ ಬಲ್ಲಂಡ ತಂಡವನ್ನು ಪರಾಭವ ಗೊಳಿಸಿತು. ನಾಗಂಡ ಪರ ದಿವಿನ್ (26ನಿ), ಉಮೇಶ್ (37,40ನಿ)ದಲ್ಲಿ ಗೋಲು ಬಾರಿಸಿದರು.

ಪಾಂಡಂಡ ತಂಡ ಬಾರದ ಕಾರಣ ಆಯೋಜಕರು ಮಚ್ಚಾರಂಡ ತಂಡವನ್ನು ವಿಜಯಿ ಎಂದು ಘೋಷಿಸಿದರು.

ಕಂಬಿರಂಡ ತಂಡವು ಸಡನ್ ಡೆತ್‍ನಲ್ಲಿ ಮೇಚಿಯಂಡ ತಂಡವನ್ನು 6-5 ಗೋಲಿನಿಂದ ಸೋಲಿಸಿತು. ನಿಗದಿತ ಅವಧಿಯಲ್ಲಿ ಎರಡು ತಂಡಗಳು 2-2 ಗೋಲುಗಳ ಸಮಬಲ ಸಾಧಿಸಿತು. ಮೇಚಿಯಂಡ ಅಪ್ಪುಟ (12ನಿ), ಪುನೀತ್ (20ನಿ), ಟೈ ಬ್ರೇಕರ್‍ನಲ್ಲಿ ಪುನೀತ್, ಸೂರಜ್, ರಿತೀಶ್, ಕಂಬಿರಂಡ ಪರ ಮಯೂರ್ (25ನಿ), ಬೋಪಣ್ಣ (31ನಿ), ಟ್ಯೆ ಬ್ರೇಕರ್‍ನಲ್ಲಿ ಯೋಗೇಶ್, ಮಯೂರ್, ಉಮೇಶ್, ಸಡತ್ ಡೆತ್‍ನಲ್ಲಿ ಬೋಪಣ್ಣ ಗೋಲು ಬಾರಿಸಿ ತಂಡಕ್ಕೆ ಜಯ ತಂದು ಕೊಟ್ಟರು.

ಮೇರಿಯಂಡ ತಂಡವು ಬಲ್ಲಚಂಡ ತಂಡವನ್ನು 3-2 ಗೋಲುಗಳಿಂದ ಟೈ ಬ್ರೇಕರ್‍ನಲ್ಲಿ ಮಣಿಸಿತು. ನಿಗದಿತ ಅವದಿಯಲ್ಲಿ 1-1 ಗೋಲಿನಿಂದ ಸಮಬಲ ಸಾಧಿಸಿತು. ಮೇರಿಯಂಡ ಕರಣ್ (10ನಿ), ಟೈ ಬ್ರೇಕರ್‍ನಲ್ಲಿ ಅಖಿಲ್,ಶರತ್, ಬಲ್ಲಚಂಡ ಪರ ವಿವೇಕ್ (12ನಿ) ಟೈ ಬ್ರೇಕರ್‍ನಲ್ಲಿ ಅದ್ವ್ಯೆತ್ ಗೋಲು ಬಾರಿಸಿ ಗೋಲಿನ ಅಂತರವನ್ನು ಕಡಿಮೆ ಮಾಡಿದರು.

ಮೈದಾನ 2 ರಲ್ಲಿ ನಡೆದ ಪಂದ್ಯದಲ್ಲಿ ಕಂಗಂಡ ತಂಡವು 4-2 ಗೋಲುಗಳಿಂದ ಬೊಳ್ಳಚೇಟ್ಟಿರ ತಂಡವನ್ನು ಟೈ ಬ್ರೇಕರ್‍ನಲ್ಲಿ ಪರಾಭವಗೊಳಿಸಿತು. ಕಂಗಂಡ ಪರ ಸೋಮಯ್ಯ (33ನಿ), ಟೈ ಬ್ರೇಕರ್‍ನಲ್ಲಿ ಪೂವಣ್ಣ, ಬೊಳ್ಳಚೆಟ್ಟಿರ ಪರ ಸೋಮಯ್ಯ (33ನಿ), ಟೈ ಬ್ರೇಕರ್‍ನಲ್ಲಿ ಮುದ್ದಯ್ಯ, ಸೋಮಯ್ಯ, ಮುತ್ತಪ್ಪ ಗೋಲು ಬಾರಿಸಿದರು.

ಬಯವಂಡ ತಂಡ 5-4 ಗೋಲುಗಳಿಂಡ ಮುಂಡ್ಯೋಳಂಡ ತಂಡವನ್ನು ಮಣಿಸಿತು. ನಿಗದಿತ ಅವಧಿಯಲ್ಲಿ 1-1 ಗೋಲುಗಳ ಸಮಬಲ ಸಾಧಿಸಿತು. ಬಯವಂಡ ಪರ ಜನಕ (32ನಿ), ಮುಂಡ್ಯೋಳಂಡ ಪರ ಬೋಪಣ್ಣ (37ನಿ) ಟೈ ಬ್ರೇಕರ್‍ನಲ್ಲಿ ಪೊನ್ನಣ್ಣ, ಜನಕ, ಪೂವಣ್ಣ, ಸೋಮಣ್ಣ, ಮುಂಡ್ಯೋಳಂಡ ಪರ ಬೋಪಣ್ಣ, ಚೀಯಣ್ಣ, ಅಚ್ಚಯ್ಯ ಗೋಲು ದಾಖಲಿಸಿದರು.

ಐನಂಡ ತಂಡ 5-0 ಗೋಲುಗಳಿಂದ ಬಲ್ಲಡಿಚಂಡ ತಂಡವನ್ನು ಸೋಲಿಸಿತು. ಐನಂಡ ಪರ ನಾಣಯ್ಯ (4ನಿ), ಪೂವಣ್ಣ 2 (5,9ನಿ), ಬೋಪಣ್ಣ (15ನಿ), ಉತ್ತಪ್ಪ (23ನಿ)ದಲ್ಲಿ ಗೋಲು ಹೊಡೆದರು.

ಬಿದ್ದಾಟಂಡ ತಂಡವು 4-1 ಗೋಲುಗಳಿಂದ ಮಲ್ಚೀರ ತಂಡವನ್ನು ಪರಾಭವಗೊಳಿಸಿತು. ಮಲ್ಚೀರ ಪರ ಶಹನ್ ಬೋಪಯ್ಯ (13ನಿ), ಬಿದ್ದಾಟಂಡ ಅಯ್ಯಪ್ಪ 2 (18,31ನಿ), ಚೆಲ್ಸಿ ಮೇದಪ್ಪ 2 (22,23ನಿ)ದಲ್ಲಿ ಗೋಲು ಬಾರಿಸಿದರು.

ನಾಮೇರ ತಂಡ 2-0 ಗೋಲುಗಳಿಂದ ತಿರೋಟಿರ ತಂಡವನ್ನು ಸೋಲಿಸಿತು. ನಾಮೇರ ಪರ ಕಿರಣ್ (11ನಿ), ವಿನು (32ನಿ)ದಲ್ಲಿ ಗೋಲು ಹೊಡೆದರು.