ಮಡಿಕೇರಿ, ಏ. 24: ಕಳೆದ ವರ್ಷ ಕೊಡಗಿನ ವಿವಿಧೆಡೆ ಸಂಭವಿಸಿದ ಪ್ರಾಕೃತಿಕ ವಿಕೋಪ ಈ ಬಾರಿಯೂ ಕಂಡುಬರುವ ಸಾಧ್ಯತೆ ಇದೆ ಎಂದು ಭಾರತೀಯ ಭೂ ವೈಜ್ಞಾನಿಕ ಸಮೀಕ್ಷಾ ಸಂಸ್ಥೆಯ ಮಾಜೀ ಡೆಪ್ಯೂಟಿ ಡೈರೆಕ್ಟರ್ ಜನರಲ್ ಡಾ. ಹೆಚ್.ಎಸ್. ಪ್ರಕಾಶ್ ಆತಂಕ ವ್ಯಕ್ತಪಡಿಸಿದ್ದಾರೆ.ಕೊಡಗು ಹಾಗೂ ಕೇರಳ ರಾಜ್ಯಗಳಲ್ಲಾದ ತೀವ್ರ ಮಳೆಯನ್ನು ಹವಾಯಿ ಹಾಗೂ ಮಾರಿಷಸ್ ದೇಶಗಳಲ್ಲಿ ಉಂಟಾದ ಜ್ವಾಲಾಮುಖಿ ಸ್ಫೋಟಕ್ಕೆ ಇವರು ಹೋಲಿಕೆ ಮಾಡಿದ್ದಾರೆ. ಜ್ವಾಲಾಮುಖಿ ಸ್ಫೋಟದಿಂದ ತೀವ್ರ ತರದ ಮೋಡಗಳು ರಚನೆಗೊಂಡು ಭಾರತದತ್ತ ಚಲಿಸಿವೆ. ಈ ಕಾರಣದಿಂದ ಕೊಡಗು ಹಾಗೂ ಕೇರಳದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಬಾರಿಯೂ ಕೂಡ 5 ಹಂತಗಳಲ್ಲಿ ತೀವ್ರ ಮಳೆ ಆಗುವ ಸಾಧ್ಯತೆ ಇದ್ದು, ಎರಡು ವಾರದ ಹಿಂದೆ ಮಾರಿಷಸ್‍ನಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟದ ನಂತರ ಕೇರಳದಲ್ಲಿ ಮೊದಲ ಮಳೆ ಬಂದಿದ್ದು, ಅದು ತೀವ್ರತರವಾಗಿತ್ತೆಂದು ಪ್ರಕಾಶ್ ಉದಾಹರಿಸಿದ್ದಾರೆ. ಇದೇ ರೀತಿ 15-20 ದಿನಗಳ ಅಂತರದಲ್ಲಿ 3ರಿಂದ 4 ಬಾರಿ ಭಾರೀ ಮಳೆಯನ್ನು ಅವರು ನಿರೀಕ್ಷಿಸಿದ್ದಾರೆ.
ಬರುವ ಆಗಸ್ಟ್ ತಿಂಗಳಲ್ಲಿ ಮಳೆಯಿಂದಾಗಿ ನೀರಿನ ಪ್ರವಾಹ ಉಂಟಾಗಲಿದ್ದು, ಮೊದಲ ಹಲವು ಮಳೆಗಳಲ್ಲಿ ನೀರು ಮಣ್ಣಿನೊಳಗೆ ಸೇರಿಕೊಳ್ಳುತ್ತದೆ. ನಂತರದ ಮಳೆಗಳು ಈ ಮಣ್ಣನ್ನು ಕೊಚ್ಚಿಸುವದರಿಂದ ಭೂಕುಸಿತ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ವೆಂದು ಪ್ರಕಾಶ್ ಹೇಳಿದ್ದಾರೆ.
ಇತ್ತೀಚೆಗೆ ಇಬ್ಬನಿಯ ಪ್ರಮಾಣ ಕಡಿಮೆಯಾಗಿರುವದ ರಿಂದ ಭೂಮಿಯ ಉಷ್ಣಾಂಶ ಹೆಚ್ಚಾಗಿದ್ದು, ಮಣ್ಣು ತೇವಾಂಶ ಕಳೆದುಕೊಂಡು ಒಣಗಿದೆ. ಇದು ಮುಂದಿನ ವಿಕೋಪವನ್ನು ಸೂಚಿಸುತ್ತದೆ ಎಂದೂ ವಿಜ್ಞಾನಿ ಪ್ರಕಾಶ್ ಅವರು ಬೆಂಗಳೂರಿನ ಡೈಜಿವಲ್ರ್ಡ್ ಮೀಡಿಯ ನೆಟ್‍ವರ್ಕ್‍ಗೆ ನೀಡಿರುವ ಸಂದರ್ಶನದಲ್ಲಿ ಮುಂದಿನ ದಿನಗಳ ಆತಂಕಗಳ ಬಗ್ಗೆ ವಿಶ್ಲೇಷಿಸಿದ್ದಾರೆ.