ಗೋಣಿಕೊಪ್ಪ ವರದಿ, ಏ. 24 : ಅತ್ತೂರು ಗ್ರಾಮದಲ್ಲಿರುವ ಇಸ್ರೇಲ್ ಮೂಲದ ಹಿಂದೂ ಸನ್ಯಾಸಿ ನಾರದ ಮುನಿಗಳ ಸಮಾಧಿ ಸ್ಥಾನದ ಸಮೀಪದಲ್ಲಿ 2 ಎಕ್ರೆ ಪ್ರದೇಶದಲ್ಲಿ ಭಾರತ ಹಾಗು ಇಸ್ರೇಲ್ ನಡುವೆ ಬಾಂಧವ್ಯ ವೃದ್ದಿಸುವ ದಿಕ್ಕಿನಲ್ಲಿ ಅಧ್ಯಯನ ಕೇಂದ್ರವನ್ನು ಸ್ಥಾಪಿಸುವದಾಗಿ ಸಮಾಧಿ ಸ್ಥಳದ ದಾನಿ ಚಾಯಾ ನಂಜಪ್ಪ ಘೋಷಿಸಿದರು.ಸಮಾಧಿ ಸ್ಥಾನದಲ್ಲಿ ನಡೆದ ನಾರದ ಮುನಿಗಳ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದ ಅವರು, ದಿಯಾ ಮಿನೋರ ಫೌಂಡೇಶನ್ ಆಶ್ರಯಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆಗೊಳ್ಳಲಿದೆ. ಫೌಂಡೇಶನ್ ಸದಸ್ಯರುಗಳಾದ ಉದ್ಯಮಿ ಬ್ರಿಜೇಶ್ ರೆಡ್ಡಿ, ಉದ್ಯಮಿ ಪ್ರಕಾಶ್ ಕಾಮತ್ ಹಾಗೂ ಅಮಿತ್ ಶೆಟ್ಟಿ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.ಸಮಾಧಿ ಸ್ಥಾನದಲ್ಲಿ ದೀಪ ಬೆಳಗುವ ಮೂಲಕ ನಾರದ ಮುನಿಗಳಿಗೆ ಗೌರವ ಸೂಚಿಸಲಾಯಿತು. ದೀಪ ಬೆಳಗಿಸುವ ಸಂದರ್ಭ ಶಂಖನಾದದ ಮೂಲಕ ಪ್ರಾರ್ಥಿಸಲಾಯಿತು. ನಾರದ ಮುನಿಗಳ ಇಸ್ರೇಲಿ ಅನುಯಾಯಿಗಳು ಸಮಾಧಿ ಸ್ಥಳದಲ್ಲಿ ಪ್ರಾರ್ಥನೆ ನಡೆಸಿಕೊಟ್ಟರು.

ಮಾಜಿ ಸಂಸದ ವಿಜಯಶಂಕರ್ ಮಾತನಾಡಿ, ಮೋದಿ ಪ್ರಧಾನಿಯಾದ ನಂತರ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗೆ ಕಡಿವಾಣ ಬಿದ್ದಿದೆ. ಹಿಂದೂ ಜನಸಂಖ್ಯೆ ಕುಸಿಯುತ್ತಿರುವದು ಆತಂಕಕಾರಿ ಬೆಳವಣಿಗೆ. ನಮ್ಮ ಪೂರ್ವಜರು ಆರ್ಥಿಕವಾಗಿ ದುರ್ಬಲರಾಗಿದ್ದರೂ ಕೂಡು ಸಂಸಾರದಲ್ಲಿ 12 ಮಕ್ಕಳಿರುತ್ತಿದ್ದರು. ಆದರೆ ಇಂದಿನ

(ಮೊದಲ ಪುಟದಿಂದ) ಪೀಳಿಗೆ ವೃತ್ತಿಗೆ ಪ್ರಾಮುಖ್ಯತೆ ನೀಡಿ ನಾಲ್ಕೈದು ವರ್ಷಗಳ ನಂತರ ಒಂದು ಅಥವಾ ಎರಡು ಮಕ್ಕಳಿಗೆ ತಮಗೆ ತಾವೇ ಕಡಿವಾಣ ಹಾಕಿಕೊಳ್ಳುತ್ತಿರುವದು ಎಚ್ಚರಿಕೆ ಗಂಟೆಯಾಗಿದೆ ಈ ಬಗ್ಗೆ ಮಕ್ಕಳನ್ನು ಹಿಂದೂ ಪ್ರಮುಖರು ಹಾಗೂ ಸಂಘಟನೆಗಳು ಗಮನ ಹರಿಸಬೇಕಾಗಿದೆ ಎಂದು ಹೇಳಿದರು.

ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಕಾರ್ಯವಾಹ ಮುಕುಂದ್ ಭಾರತ ಹಾಗೂ ಇಸ್ರೇಲ್ ದೇಶಗಳು ಭಯೋತ್ಪಾದನೆಗೆ ಗುರಿಯಾಗಿದೆ. ದಕ್ಷಿಣ ಏಷ್ಯಾದಲ್ಲಿ ಭಾರತ, ಅರಬ್ ದೇಶಗಳಲ್ಲಿ ಇಸ್ರೇಲ್ ಶಾಂತಿಗಾಗಿ ಹೋರಾಡುತ್ತಿದೆ. ಸೋವಿಯತ್ ಯೂನಿಯನ್ ವಿಭಜನೆ ನಂತರ 1992 ರಲ್ಲಿ ಭಾರತ ಇಸ್ರೇಲ್ ಜೊತೆ ವಿವಿಧ ಕ್ಷೇತ್ರಗಳಲ್ಲಿ ಕೈಜೋಡಿಸಲು ಅಣಿಯಾಯಿತು ಎಂದರು.

ಸೋವಿಯತ್ ಯೂನಿಯನ್ ವಿಭಜನೆ ನಂತರ 1992 ರಲ್ಲಿ ಭಾರತ ಇಸ್ರೇಲ್ ಜೊತೆ ವಿವಿಧ ಕ್ಷೇತ್ರಗಳಲ್ಲಿ ಕೈಜೋಡಿಸಲು ಅಣಿಯಾಯಿತು. ಹಿಂದೂಗಳು ಹಾಗೂ ಯಹೂದಿಗಳು ಧಾರ್ಮಿಕ ವಿಚಾರದ ಗುರು ಶಿಷ್ಯ ಪರಂಪರೆ, ಧ್ಯಾನ ಹಾಗೂ ಜನಗಳ ಮಧ್ಯೆ ಸಂವಹನ ಕಾರ್ಯದಲ್ಲಿ ಒಂದೇ ರೀತಿಯ ಸಾಮಥ್ರ್ಯವನ್ನು, ಕ್ಷೇತ್ರಗಳಲ್ಲಿ ಒಂದೇ ರೀತಿಯ ಸಾಮ್ಯತೆ ಕಾಣಬಹುದು. ಇತ್ತೀಚಿನ ಪುಲ್ವಾಮ ಆತ್ಮಾಹುತಿ ದಾಳಿಯ ನಂತರ ಇಸ್ರೇಲ್ ಭಾರತಕ್ಕೆ ತನ್ನದೇ ಆದ ರಕ್ಷಣಾ ಕಾರ್ಯತಂತ್ರವನ್ನು ಒದಗಿಸುವ ಮೂಲಕ ಎರಡು ದೇಶಗಳು ಭಯೋತ್ಪಾದನೆ ವಿರುದ್ದ ಕೈಜೋಡಿಸಿರುವದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಭಾರತ ಹಾಗೂ ಇಸ್ರೇಲ್ ನಡುವಿನ ಬಾಂಧವ್ಯವನ್ನು ವೃದ್ದಿಸುವ ನಿಟ್ಟಿನಲ್ಲಿ ಎರಡು ಹಂತದ ಸಂವಾದ ಕಾರ್ಯಕ್ರಮ ನಡೆಯಿತು. ಭಾರತ ಹಾಗೂ ಇಸ್ರೇಲ್ ನಡುವಿನ ಬಾಂಧವ್ಯ ವೃದ್ಧಿ ಸವಾಲುಗಳು ಹಾಗೂ ಸಾಂಸ್ಕøತಿಕ ಹಾಗೂ ಆರ್ಥಿಕ ನೆಲೆಗಟ್ಟಿನಲ್ಲಿ ಬಾಂಧವ್ಯ ವೃದ್ಧಿ ವಿಷಯದಲ್ಲಿ ಸಂವಾದ ನಡೆಯಿತು.

ಪೊಲೀಸ್ ಎಡಿಜಿಪಿ ಭಾಸ್ಕರ್ ರಾವ್, ನಟಿ ಮಾಳವಿಕ, ಮಾಜಿ ರಕ್ಷಣಾ ಕಾರ್ಯದರ್ಶಿ ಶೇಖರ್, ವಿಹೆಚ್‍ಪಿ ರಾಷ್ಟ್ರೀಯ ಸಹ ಕಾರ್ಯದರ್ಶಿ ವಿಜ್ಞಾನಂದ, ವಿಹೆಚ್ ಕ್ಷೇತ್ರ ಪ್ರಮುಖ್ ಗೋಪಾಲ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರವಾರಕ ಗಿರಿಧರ್ ಉಪಾಧ್ಯಾಯ, ವಿಶ್ವಹಿಂದೂ ಫೌಂಡೇಶನ್‍ನ ಪರಿಪೂರ್ಣನಂದಾಜಿ, ಬಾರ್ ಕ್ಲೇಸ್ ಬ್ಯಾಂಕ್ ನ ಮಾಜಿ ಸಿಇಓ ಸತ್ಯ ಬನ್ಸಲ್ ಶಾಸ್ತ್ರಿ ಭಾಗವಹಿಸಿದ್ದರು.

-ಸುದ್ದಿಪುತ್ರ