ಮಡಿಕೇರಿ, ಏ.21 : ಕೊಡವ ಮಕ್ಕಡ ಕೂಟ ಮತ್ತು ಕೊಡಗು ಪ್ರೆಸ್‍ಕ್ಲಬ್ ಸಹಯೋಗದಲ್ಲಿ ತಾ. 28ರಂದು ಬೆಳಗ್ಗೆ 10 ಗಂಟೆಗೆ ಮಡಿಕೇರಿಯ ಪತ್ರಿಕಾಭವನ ಸಭಾಂಗಣದಲ್ಲಿ ಕೊಡವ ಮಕ್ಕಡ ಕೂಟದ 25ನೇ ಪ್ರಕಟಣೆಯಾಗಿ ಆಂಗ್ಲ ಭಾಷೆಯಲ್ಲಿ ‘ದಿ ಮೇಜರ್ ಹೂ ಕೆಪ್ಟ್ ಹಿಸ್ ಕೂಲ್’ ಕೃತಿ ಲೋಕಾರ್ಪಣೆ ಗೊಳ್ಳಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ನಿವೃತ್ತ ಅಧಿಕಾರಿ ಏರ್‍ಮಾರ್ಷಲ್ ಕೊಡಂದೇರ ಸಿ.ಕಾರ್ಯಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಲೆಫ್ಟಿನೆಂಟ್ ಜನರಲ್ ಡಾ. ಬಿಎನ್‍ಬಿಎಂ ಪ್ರಸಾದ್ ಕೊಡಗು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಾಚಮಂಡ ಎ.ಕಾರ್ಯಪ್ಪ, ಮೇಜರ್ ಜನರಲ್ ಕೊಡಂದೇರ ಅರ್ಜುನ್ ಮುತ್ತಣ್ಣ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನ್‍ರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷÀ ಕರ್ನಲ್ ಕಂಡ್ರತಂಡ ಸಿ.ಸುಬ್ಬಯ್ಯ, ವಿಎಸ್‍ಎಂ ಪುಸ್ತಕದ ಕೇಂದ್ರ ಬಿಂದು ಆಗಿರುವ ಮಹಾವೀರ ಚಕ್ರ ಪುರಸ್ಕøತ ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಎಸ್.ಗಣಪತಿ ಕೊಡಗು ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪುಸ್ತಕ ಸಮಿತಿಯ ಸಂಚಾಲಕÀ ಬಿ.ಸಿ.ದಿನೇಶ್, ಲೇಖಕÀ ಮೂಕೊಂಡ ನಿತಿನ್ ಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಕೃತಿ ರಚನೆಕಾರ ಕೊಕ್ಕಲೆರ ರಂಜಿತ್ ಮಾಚಯ್ಯ ಮಾತನಾಡಿ, ಭಾರತೀಯ ಸೇನೆಯಲ್ಲಿ ಕೊಡಗಿನವರ ಸಾಧನೆ ಬಗ್ಗೆ ರಚಿಸಿರುವದಾಗಿ ತಿಳಿಸಿದರು.
ಸೇನಾ ಸಾಧಕರ ಬಗ್ಗೆ
ಕ್ರಿ.ಶ 1174ರ ಪಾಲ್ಪರೆಶಾಸÀನದಲ್ಲಿ ಕೊಡಗಿನ ಕೊಡವ ಜನಾಂಗದ ಸೇನಾಧಿಕಾರಿಗಳು ಪಾಲ್ಗೊಂಡ ಚರಿತ್ರೆಯಿದೆ. ಭಾರತೀಯ “ಭೂ ಸೇನೆಯ ಪಿತಾಮಹ” ಎನಿಸಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ; ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ಕೊಡಗಿನವರು.
ಈ ಪರಂಪರೆಯ ಮುಂದುವರಿಕೆ ಯಾಗಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪುತ್ರ ನಿವೃತ್ತ ಏರ್‍ಮಾರ್ಷಲ್ ಕೆ.ಸಿ.ಕಾರ್ಯಪ್ಪ ಭಾರತೀಯ ವಾಯು ಸೇನೆಯಲ್ಲಿ ದಕ್ಷಿಣ ಪಶ್ಚಿಮ ಏರ್‍ಕಮಾಂಡ್‍ನ ಮುಖ್ಯಸ್ಥರಾಗಿ ದ್ದವರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ತಂಗಿಯ ಮಗ, ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಸಿ.ನಂದ ಅವರು ಭಾರತೀಯ ಭೂ ಸೇನೆಯ ಉತ್ತರ ವಲಯದ ಮುಖ್ಯಸ್ಥರಾಗಿದ್ದರು. ಇದೀಗ ಲೆಫ್ಟಿನೆಂಟ್ ಜನರಲ್ ಪಟ್ಟಚೆರುವಂಡ ಸಿ.ತಿಮ್ಮಯ್ಯ ಅವರು ಭಾರತೀಯ ಭೂ ಸೇನೆಯ ತರಬೇತಿ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಪ್ರಸ್ತುತ ಭಾರತೀಯ ಭೂ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಹುದ್ದೆಯಲ್ಲಿ ಕೋದಂಡ ಪೂವಯ್ಯ ಕಾರ್ಯಪ್ಪ ಕರ್ತವ್ಯ ನಿರ್ವಹಿಸುತ್ತಿದ್ದು, ಮೇಜರ್ ಜನರಲ್ ಆಗಿ ಚೇಮಿರ ಬನ್ಸಿ ಪೊನ್ನಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ನೌಕಾ ಪಡೆಯಲ್ಲಿ ರಿಯರ್ ಎಡ್ಮಿರಲ್ ಆಗಿ ಐಚ್ಚೆಟ್ಟಿರ ಬಿ.ಉತ್ತಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ.
ಭಾರತೀಯ ಭೂ ಸೇನೆಯಲ್ಲಿ ಕೊಡಗಿನವರ ಸಾಧನೆ ಅಧ್ವಿತೀಯವಾದದು ಸೇನಾ ಪರಂಪರೆಯ ಇತಿಹಾಸದಲ್ಲಿ ಇಲ್ಲಿಯವರೆಗೆ ಇಬ್ಬರು ಮಾತ್ರ ಮಹಾವೀರ ಚಕ್ರ ಪ್ರಶಸ್ತಿಗೆ ಪಾತ್ರರಾಗಿದ್ದು, ಒಬ್ಬರು ಸ್ಕ್ವಾ. ಲೀ. ಅಜ್ಜಮಾಡ ಬಿ.ದೇವಯ್ಯ ಇನ್ನೊಬ್ಬರು ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಎಸ್.ಗಣಪತಿ. ಕೊಡವ ಮಕ್ಕಡ ಕೂಟ ಈಗಾಗಲೇ ಸ್ಕ್ವಾ. ಲೀ. ಅಜ್ಜಮಾಡ ದೇವಯ್ಯರವರ ಕುರಿತು ಕನ್ನಡದಲ್ಲಿ ಪುಸ್ತಕ ಪ್ರಕಟಿಸಿದ್ದು 2ನೇ ಮುದ್ರಣ ಕಂಡಿದೆ. ಅಜ್ಜಮಾಡ ಬಿ.ದೇವಯ್ಯ ಅವರು 1965ರ ಪಾಕ್ ಯುದ್ದದಲ್ಲಿ ಮರಣೋತ್ತರವಾಗಿ ಮಹಾವೀರ ಚಕ್ರವನ್ನು ಪಡೆದಿದ್ದರೆ, ಪುಟ್ಟಿಚಂಡ ಎಸ್.ಗಣಪತಿಯವರು ಭಾರತೀಯ ಭೂ ಸೇನೆ ಶ್ರೀಲಂಕಾದಲ್ಲಿ ನಡೆಸಿದ ಎಲ್‍ಟಿಟಿಇ ವಿರುದ್ಧ ಕಾರ್ಯಾ ಚರಣೆಯ ಸಂದರ್ಭ ತೋರಿದ ಅಪ್ರತಿಮ ಸಾಹಸಕ್ಕಾಗಿ 1988 ರಲ್ಲಿ ಈ ಪ್ರಶಸ್ತಿ ಪಡೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೊಡವ ಮಕ್ಕಡ ಕೂಟದ ಪ್ರಧಾನ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಪುಸ್ತಕ ಸಮಿತಿ ಸಂಚಾಲಕರಾದ ಬಿ.ಸಿ.ದಿನೇಶ್ ಹಾಗೂ ಖಜಾಂಚಿ ಅಮ್ಮಾಟಂಡ ಮೇದಪ್ಪ ಉಪಸ್ಥಿತರಿದ್ದರು.