ಮಡಿಕೇರಿ, ಏ. 21: ನಗರದ ಶ್ರೀ ಕಂಚಿಕಾಮಾಕ್ಷಿ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಅಂಗವಾಗಿ ಇಂದು ಕೇರಳದ ಸಾಂಪ್ರದಾಯಿಕ ಚಂಡೆವಾದ್ಯ, ಸಿಂಗಾರಿ ಮೇಳ ಮತ್ತಿತರ ಕಲಾ ತಂಡಗಳನ್ನು ಒಳಗೊಂಡು ಕಳಸÀಗಳ ಮೆರವಣಿಗೆ ನಡೆಯಿತು.

ತಾ. 22 ರಂದು (ಇಂದು) ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಳಸ ಪೂಜೆ, ಕಳಸಾಭಿಷೇಕ, ಮಹಾ ಕುಂಬಾಭಿಷೇಕ ಮತ್ತು ಮಹಾಪೂಜೆ ಹಾಗೂ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.