ಕೂಡಿಗೆ, ಏ. 21: ಕುಶಾಲನಗರದಿಂದ ಹೆಬ್ಬಾಲೆ ಕಡೆಗೆ ಹೋಗುತ್ತಿದ್ದ ಕಾರು ಕಣಿವೆ ಸಮೀಪದ ಹಕ್ಕೆ ಹೆದ್ದಾರಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಹೊಡೆದು ನಂತರ ರಸ್ತೆಯ ಸೂಚನಾ ಫಲಕಕ್ಕೆ ಡಿಕ್ಕಿಯಾಗಿ ನಂತರ ರಸ್ತೆಯ ಸಮೀಪವಿದ್ದ ಮನೆಯೊಂದರ ತಡೆಗೋಡೆಗೆ ಅಪ್ಪಳಿಸಿದೆ. ಅದೃಷ್ಟವಶಾತ್ ಚಾಲಕ ಹೆಬ್ಬಾಲೆಯ ಗಣೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.