ವೀರಾಜಪೇಟೆ, ಏ. 21: ನಗರದ ಇತಿಹಾಸ ಪ್ರಸಿದ್ಧ ಸಂತ ಅನ್ನಮ್ಮ ದೇವಾಲಯದಲ್ಲಿ ಯೇಸು ಕ್ರಿಸ್ತನನ್ನು ಶಿಲುಬೆÉಗೇರಿಸಿ ಮರು ಜನ್ಮ ಪಡೆದ ಗುಡ್ ಫ್ರೈಡೆ ದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಯಾತ್ರೆಯು 14 ಸ್ಥಳದಲ್ಲಿ ಪ್ರಭು ಯೇಸು ಕ್ರಿಸ್ತರ ಜೀವನಯಾಮಗಳನ್ನು ಮತ್ತು ಶಿಲುಬೆಗೇರಿಸುವ ಸಂದರ್ಭದಲ್ಲಿ ಅವರು ಅನುಭವಿಸಿದ ಯಾತನೆಯನ್ನು ಕೀರ್ತನೆಗಳ ಮೂಲಕ ತಿಳಿಸಲಾಯಿತು. ತಮ್ಮ ಅರಿವಿನ ಶಾಂತಿಯನ್ನು ಧರ್ಮಾಭಿಮಾನಿಗಳು ದೇವರ ಬಳಿ ಸಮರ್ಪಣೆ ಮಾಡಿದರು. ಸಂತ ಅನ್ನಮ್ಮ ದೇವಾಲಯದ ಧರ್ಮಗುರು ರೇ.ಫಾ . ಮದಲೈಮುತ್ತು ಮತ್ತು ಸಹಾಯಕ ಗುರು ಫಾ. ರೋಷನ್ ಬಾಬು ಸಮ್ಮುಖದಲ್ಲಿ ನಡೆದ ಬಲಿ ಪೂಜೆಯಲ್ಲಿ ಭಕ್ತರಿಗೆ ಪ್ರಭು ಯೇಸು ಕ್ರಿಸ್ತ ಶಿಲುಬೆಯಲ್ಲಿ ಪ್ರಾಣ ತ್ಯಾಗ ಮಾಡಿ ಭಕ್ತರ ಸಕಲ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಲು ಮತ್ತೊಮ್ಮೆ ಜನ್ಮತಾಳಿದ ಬಗ್ಗೆ ತಿಳಿಸಲಾಯಿತು. ಅವರ ಪುನರುತ್ಥಾನದ ದರ್ಶನವನ್ನು ಮತ್ತೊಮ್ಮೆ ಕರುಣಿಸಿ ತ್ಯಾಗ ಹಾಗೂ ಸಹನೆಯ ಬಗ್ಗೆ ತಮ್ಮ ಸಂದೇಶದಲ್ಲಿ ಹೇಳಿದರು.

ಸಂತ ಅನ್ನಮ್ಮ ದೇವಾಲಯದಲ್ಲಿ ಗುಡ್ ಫ್ರೈಡೆ ಆಚರಣೆಯಲ್ಲಿ ದೇವಾಲಯದ ಕನ್ಯಾಸ್ತ್ರಿಯರು ಸೇರಿದಂತೆ ವಿವಿಧ ಗ್ರಾಮದಲ್ಲಿ ನೆಲೆಸಿರುವ ಕ್ರೈಸ್ತ ಧರ್ಮಿಯರು ಭಾಗವಹಿಸಿದ್ದರು.