*ಗೋಣಿಕೊಪ್ಪಲು, ಏ. 16: ಆದಿವಾಸಿಗಳ ಹಬ್ಬ ಜೇನು ಕುರುಬ ಕುಟುಂಬಗಳ ನಡುವೆ ನಡೆಯುವ ಎರಡನೇ ವರ್ಷದ ಟೆನ್ನಿಸ್ ಬಾಲ್, ಕ್ರಿಕೆಟ್ ಪಂದ್ಯಾಟ ಚಿಕ್ಕ ಮನೆ ತಾಯಿ ಕುಟುಂಬಸ್ಥರು ಮೇ 8 ರಿಂದ 12 ರವರೆಗೆ ನಡೆಸಲಿದ್ದಾರೆ ಎಂದು ಜೇನು ಕುರುಬ ಯುವಕ ಸಂಘದ ಅಧ್ಯಕ್ಷ ರಘು ತಿಳಿಸಿದ್ದಾರೆ.

ತಿತಿಮತಿ ಜೇನು ಕುರುಬ ಯುವಕ ಸಂಘದ ಆಶ್ರಯದಲ್ಲಿ ಐದು ದಿನಗಳ ಕಾಲ ತಿತಿಮತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಎರಡನೇ ವರ್ಷದ ಪಂದ್ಯಾಟ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಇದೇ ಸಂದರ್ಭ ಮಹಿಳೆಯರಿಗೆ ಹಗ್ಗ ಜಗ್ಗಾಟ, ಮಕ್ಕಳಿಗೆ ಆಟೋಟ ಸ್ಪರ್ದೆ ನಡೆಯಲಿದೆ ಎಂದು ಹೇಳಿದರು.ಜನಾಂಗವನ್ನು ಒಟ್ಟುಗೂಡಿಸುವ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ಜೇನು ಕುರುಬ ಸಮುದಾಯದ ಪಂದ್ಯಾಟ ನಡೆಸಲಾಗುತ್ತಿದೆ. ಜೇನು ಕುರುಬರು ತಮ್ಮದೇ ಮನೆತನದ ಹೆಸರನ್ನು ಹೊಂದಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಿಂದ ಬಹಳಷ್ಟು ಮನೆತನದ ಹೆಸರು ಅಳಿದು ಹೋಗಿದೆ. ಉಳಿದ ಮನೆತನದ ಹೆಸರುಗಳನ್ನು ಸಮಾಜಕ್ಕೆ ತಿಳಿಯ ಪಡಿಸುವ ಮೂಲಕ ಇತರ ಜನಾಂಗದವರಂತೆ ಕುರುಬ ಜನಾಂಗವು ಸಮಾಜದ ಮುಖ್ಯವಾಹಿನಿಯಲ್ಲಿ ಪ್ರಾಮುಖ್ಯತೆಯನ್ನು ಪೆಡೆದುಕೊಳ್ಳುವ ಉದ್ದೇಶದಿಂದ ಈ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದರು. ಜನಾಂಗದವರಲ್ಲಿ ಒಗ್ಗಟ್ಟು ಮತ್ತು ಬಾಂದವ್ಯವನ್ನು ಬೆಸೆಯುವ

(ಮೊದಲ ಪುಟದಿಂದ) ಉದ್ದೇಶವು ಈ ಪಂದ್ಯಾಟದ ಹಿಂದಿದೆ ಎಂದು ತಿಳಿಸಿದರು. ಕ್ರೀಡಾ ಆಸಕ್ತ ಸಹಾಯ ದಾನಿಗಳಿಂದ ಈ ಪಂದ್ಯಾಟ ನಡೆಯಲಿದೆ. ಕುರುಬ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಂದ್ಯಾಟದ ಆಯೋಜಕರಿಗೆ ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಈ ಸಂದರ್ಭ ಕರೆ ನೀಡಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಮನು, ಕಾರ್ಯದರ್ಶಿ ಅಯ್ಯಪ್ಪ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗೆ 99456902, 8105090583, 9945128263 ಮತ್ತು 9148542668 ಸಂಖ್ಯೆಯನ್ನು ಸಂರ್ಪಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.