ಗೋಣಿಕೊಪ್ಪ ವರದಿ, ಏ. 16 : ಹಾಕಿಕೂರ್ಗ್ ವತಿಯಿಂದ ಕಾಕೋಟುಪರಂಬು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿರುವ ಕೂರ್ಗ್ ಚಾಂಪಿಯನ್ ಟ್ರೋಫಿ ಹಾಗೂ ಚಾಂಪಿಯನ್ಸ್ ಲೀಗ್ ಪಂದ್ಯಾಟ ಟೈಸ್ ಬಿಡುಗಡೆ ಮಾಡುವ ಕಾರ್ಯ ಇಂದು ನಡೆಯಿತು.

ಕೊಡವ ಸಮಾಜ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟೂರ್ನಮೆಂಟ್ ಅಧ್ಯಕ್ಷ ಎಂ. ಪಿ. ಸುಬ್ಬಯ್ಯ ಹಾಗೂ ಪದಾಧಿಕಾರಿಗಳು ಬಿಡುಗಡೆ ಗೊಳಿಸಿದರು.ನಂತರ ಮಾತನಾಡಿದ ಸುಬ್ಬಯ್ಯ, ಈಗಾಗಲೇ ಚಾಂಪಿಯನ್ಸ್ ಟ್ರೋಫಿಗೆ 149 ಕೊಡವ ಕುಟುಂಬಗಳು ನೋಂದಾಯಿಸಿ ಕೊಂಡಿವೆ. ತಾ. 20 ರಂದು ಮೇ 10 ರ ವರೆಗೆ ಟೂರ್ನಿ ನಡೆಯಲಿದೆ. ಉದ್ಘಾಟನಾ ದಿನವಾದ ಎಪ್ರಿಲ್ 20 ರಂದು ಚಾಂಪಿಯನ್ಸ್ ಟ್ರೋಫಿಯ ಹಾಗೂ ಚಾಂಪಿಯನ್ಸ್ ಲೀಗ್ ಪಂದ್ಯಗಳು ನಡೆಯಲಿವೆÉ ಎಂದರು. ಅಲ್ಲಿನ 2 ಮೈದಾನದಲ್ಲಿ ಟೂರ್ನಿ ನಡೆಯಲಿದೆ. ನಿರೀಕ್ಷೆಗಿಂತ ಹೆಚ್ಚು ತಂಡಗಳು ನೋಂದಣಿ ಮಾಡಿಕೊಂಡಿರುವದು ಹಾಕಿ ಆಟಕ್ಕೆ ಹೆಚ್ಚು ಪ್ರೋತ್ಸಾಹ ದೊರೆತಂತಾಗಿದೆ ಎಂದರು.ಚಾಂಪಿಯನ್ಸ್ ಲೀಗ್ ಟೂರ್ನಿ ಆಯೋಜಿಸಲಾಗಿದೆ. ಇದರಲ್ಲಿ 10 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಚೇಂದಂಡ, ಕಲಿಯಂಡ,

(ಮೊದಲ ಪುಟದಿಂದ) ಚೆಪ್ಪುಡೀರ, ಮುಕ್ಕಾಟೀರ (ಬೋಂದ), ಪಳಂಗಂಡ, ಪರದಂಡ, ಮಂಡೇಪಂಡ, ಕುಲ್ಲೆಟೀರ, ಅಂಜಪರವಂಡ ಹಾಗೂ ಕೂತಂಡ ತಂಡಗಳು ಸ್ಪರ್ಧಿಸಲಿವೆ ಎಂದರು.

ಈ ಸಂದರ್ಭ ಹಾಕಿಕೂರ್ಗ್ ಉಪಾಧ್ಯಕ್ಷರುಗಳಾದ ಪಳಂಗಂಡ ಲವಕುಮಾರ್, ಪಾರ್ಥ ಚೆಂಗಪ್ಪ, ಮೇಕೇರಿರ ಪೆಮ್ಮಯ್ಯ, ಕಳ್ಳಿಚಂಡ ಪ್ರಸಾದ್, ಕಾರ್ಯದರ್ಶಿ ಬುಟ್ಟಿಯಂಡ ಚೆಂಗಪ್ಪ, ಖಜಾಂಜಿ ಐನಂಡ ಲಾಲಾ ಅಯ್ಯಣ್ಣ, ತಾಂತ್ರಿಕ ಸಮಿತಿ ಮುಖ್ಯಸ್ಥ ನೆಲ್ಲಮಕ್ಕಡ ಪವನ್, ಜಂಟಿ ಕಾರ್ಯದರ್ಶಿಗಳಾದ ದಿವ್ಯಾ ಮುತ್ತಪ್ಪ, ಕೊಕ್ಕಂಡ ರೋಶನ್ ಉಪಸ್ಥಿತರಿದ್ದರು.