ಮಡಿಕೇರಿ, ಏ. 17: ಮಡಿಕೇರಿಯ ಕಲಾವಿದ ಸಂದೀಪ್ ಕುಮಾರ್ ಅವರು ನಗರದ ರಾಜಾಸೀಟ್‍ನಲ್ಲಿ ತಾ. 20ರಿಂದ ವಿದ್ಯಾರ್ಥಿಗಳಿಗೆ ಮತ್ತು ಕಲಾಸಕ್ತರಿಗೆ ಕಂಟೆಂಪ್ಟರಿ ಆರ್ಟ್ ಶೋ ಮತ್ತು ಉಚಿತ ಲೈವ್ ಪೈಂಟಿಂಗ್ ತರಬೇತಿ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದಾರೆ. ಸಂಜೆ 4ರಿಂದ 6ರವರೆಗೆ ಈ ಉಚಿತ ತರಬೇತಿ ನೀಡಲಿರುವದಾಗಿ ಅವರು ತಿಳಿಸಿದ್ದಾರೆ.