ಮಡಿಕೇರಿ ಏ.17 :‘ಮತದಾನ’ ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದ್ದು, ಇಂತಹ ಮತದಾನಕ್ಕೆ ಜನಸಾಮಾನ್ಯರಿಗೆ ಪ್ರೇರಣೆ ಮತ್ತು ಉತ್ತೇಜನ ನೀಡುವ ಸಲುವಾಗಿ ನಗರದ ಅಮೃತ ಇಎನ್‍ಟಿ ಕೇರ್‍ನಲ್ಲಿ ‘ಮತದಾನ ಮಾಡಿದವರಿಗೆ ಉಚಿತ ತಪಾಸಣೆ’ಯನ್ನು ತಾ.18 ರಂದು (ಇಂದು) ಏರ್ಪಡಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅಮೃತ ಇಎನ್‍ಟಿ ಕೇರ್‍ನ ಪ್ರಮುಖರು ಹಾಗೂ ಕರ್ನಾಟಕ ಇಎನ್‍ಟಿ ಅಸೋಸಿಯೇಷನ್ ಅಧ್ಯಕ್ಷ ಡಾ.ಮೋಹನ್‍ಅಪ್ಪಾಜಿ, ಮತ ಚಲಾಯಿಸಿದವರಿಗೆ ಮತದಾನದ ದಿನ ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಕಿವಿ, ಮೂಗು ಮತ್ತು ಗಂಟಲು ತಪಾಸಣೆÉಯನ್ನು ನಗರದ ರಾಜಾಸೀಟು ರಸ್ತೆಯ ಅಮೃತ ಕ್ಲಿನಿಕ್‍ನಲ್ಲಿ ಉಚಿತವಾಗಿ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಅಮೃತ ವರ್ಟಿಗೋ ಕ್ಲಿನಿಕ್‍ನಲ್ಲಿ ತಾ. 23 ರಂದು ಮಧ್ಯಾಹ್ನ 3 ಗಂಟೆಯ ಬಳಿಕ ಉಚಿತ ತಪಾಸಣೆಯನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಮೊಬೈಲ್ ಸಂಖ್ಯೆ 8792874030, 08272-221460 ಮೂಲಕ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದೆಂದರು.

ಸುದ್ದಿಗೋಷ್ಠಿಯಲ್ಲಿ ಆಡಿಯೋಲಾಜಿಸ್ಟ್ ಅಚ್ಚಯ್ಯ ಉಪಸ್ಥಿತರಿದ್ದರು.