ವೀರಾಜಪೇಟೆ, ಏ. 17 : ವೀರಾಜಪೇಟೆ ಗಾಂಧಿನಗರದ ನಿವಾಸಿ ಹಾಗೂ ಕಾಫಿ ಬೆಳೆಗಾರರಾಗಿದ್ದ ಮುಂಡ್ಯೋಳಂಡ ಎಸ್.ಶರೀನ್ ಚಂಗಪ್ಪ (31) ಇಂದು ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಾಂಧಿನಗರದ ದಿ. ಮುಂಡ್ಯೋಳಂಡ ಸೋಮಣ್ಣ ಅವರ ಪುತ್ರ ಶರೀನ್ ಚಂಗಪ್ಪ ನಿರುದ್ಯೋಗಿಯಾಗಿದ್ದು ಕುಟುಂಬದ ಕಾಫಿತೋಟ ನೋಡಿಕೊಳ್ಳುತ್ತಿದ್ದರು. ಯುವಕ ಕಾಂಗ್ರೆಸ್ ಪಕ್ಷದ ವೀರಾಜಪೇಟೆ ನಗರ ಸಮಿತಿಯ ಮಾಜಿ ಅಧ್ಯಕ್ಷರೂ ಆಗಿದ್ದ ಶರೀನ್ ಚಂಗಪ್ಪನ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮನೆಯ ಕೊಠಡಿಯೊಂದರಲ್ಲಿ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡಿದ್ದು ತಡವಾಗಿ ಮನೆಯವರಿಗೆ ತಿಳಿದ ನಂತರ ರಾತ್ರಿ ಇಲ್ಲಿನ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ವೀರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೃತರ ತಂದೆ ಸೋಮಣ್ಣ ಅವರು ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರೆ, ಅವರ ಪತ್ನಿ ಕುಸುಮಾ ಸೋಮಣ್ಣ ಅವರು ವೀರಾಜಪೇಟೆಯಲ್ಲಿರುವ ಕೊಡಗು ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಮೃತರು ಅವಿವಾಹಿತರಾಗಿದ್ದಾರೆ.