ಮಡಿಕೇರಿ, ಏ. 17: ಮುಸ್ಲಿಮರ ವಾರ್ಷಿಕ ಬರಾಅತ್ ಶುಭರಾತ್ರಿ ತಾ. 20ರಂದು ಆಚರಿಸಲಾಗುತ್ತದೆ. ಅಂದು ರಾತ್ರಿ ಬರಾಅತ್‍ನ ಪ್ರಯುಕ್ತ ಮಡಿಕೇರಿಯ ಎಂ.ಎಂ. ಮಸೀದಿಯಲ್ಲಿ ಧಾರ್ಮಿಕ ಉಪನ್ಯಾಸ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ತಾ. 21ರಂದು ಹಗಲು ಬರಾಅತ್‍ನ ವ್ರತಾಚರಣೆ ಐಚ್ಚಿಕವಾದುದೆಂದು ಎಂ.ಎಂ. ಮಸೀದಿಯ ಧರ್ಮಗುರು ಅಬ್ದುಲ್ ಹಮೀದ್ ಮದನಿ ತಿಳಿಸಿದ್ದಾರೆ.