ಮಡಿಕೇರಿ, ಏ. 17 : ಮಡಿಕೇರಿಯಲ್ಲಿರುವ ಜ್ಯೋತಿ ಕ್ಯಾಲಿಗ್ರಫಿ ಮತ್ತು ಹ್ಯಾಂಡ್ ರೈಟಿಂಗ್ ಕ್ಲಾಸಸ್ ವತಿಯಿಂದ ತಾ. 20 ಮತ್ತು 21 ರಂದು ಎರಡು ದಿನಗಳ ಕಾಲ ತರಬೇತಿ ಶಿಬಿರ ಏರ್ಪಡಿಸಲಾಗಿದೆ.

ಮಡಿಕೇರಿಯಲ್ಲಿನ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ತಾ. 20 ಮತ್ತು 21 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಆಯೋಜಿತ ಶಿಬಿರದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಕ್ಯಾಲಿಗ್ರಫಿ ಕುರಿತು ತರಬೇತಿ ನೀಡಲಾಗುತ್ತದೆ. ಅದರೊಂದಿಗೆ ಹಿಂದೆ ಮಕ್ಕಳು ತಯಾರಿಸಿದ ಕ್ಯಾಲಿಗ್ರಫಿ ಕಲೆಯ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ. ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿಗೆ 9880972635 ಸಂಪರ್ಕಿಸಹುದು.