ಸುಂಟಿಕೊಪ್ಪ, ಏ. 17: ಸಮೀಪದ ಶಿರಂಗಾಲ ಗ್ರಾಮದ ಈಶ್ವರ (ಗಂಗಾಧರೇಶ್ವರ), ಮಹಾಗಣಪತಿ, ದುರ್ಗಾದೇವಿ, ವೀರಭದ್ರ ಸ್ವಾಮಿ, ದಂಡಿನ ಮಾರಿಯಮ್ಮ, ಮಾಸ್ತಿಯಮ್ಮ, ಗ್ರಾಮ ದೇವತೆ ಮತ್ತು ಬೆಳ್ಳಾರಿಕಮ್ಮ ದೇವರುಗಳ ವಾರ್ಷಿಕ ಮಹಾ ಪೂಜೋತ್ಸವ ತಾ. 18 ರಿಂದ (ಇಂದಿನಿಂದ) ನಡೆಯಲಿದೆ, ಬೆಳಿಗ್ಗೆ 8 ಗಂಟೆಗೆ ಗ್ರಾಮ ದೇವತೆ ಪೂಜೆ.

ತಾ. 20 ರಂದು ಸಂಜೆ 4 ಗಂಟೆಗೆ ತಂತ್ರಿಗಳ ಆಗಮನ, ದೇವರಿಗೆ ಫಲನ್ಯಾಸ, ಮಹಾಪೂಜೆ, ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ.

ತಾ. 21ರಂದು ಬೆಳಿಗ್ಗೆ 7.30 ಗಂಟೆಗೆ ದೇವರ ನೃತ್ಯ ಬಲಿ, ದೇವರ ಪೂಜೆ, ಗಣಹೋಮ, ಏಕದಶ, ರುದ್ರಾಭಿಷೇಕ, ಮಹಾಪೂಜೆ, ತೀರ್ಥಪ್ರಸಾದ, ಅನ್ನ ಸಂತರ್ಪಣೆ, ಸಂಜೆ 4ಕ್ಕೆ ನೆರಪುಬಲಿ, ಸಂಜೆ 6.30ಕ್ಕೆ ದುರ್ಗಾಪೂಜೆ, 7.30ಕ್ಕೆ ರಂಗಪೂಜೆ, ಮಹಾಪೂಜೆ ನಂತರ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ.

ತಾ. 22ರಂದು ಬೆಳಿಗ್ಗೆ 7 ಗಂಟೆಗೆ ಬೆಳ್ಳಾರಿಕಮ್ಮ ದೇವರ ಪೂಜೆ, 8.30ಕ್ಕೆ ಈಶ್ವರ ದೇವಸ್ಥಾನಲ್ಲಿ ಗಣಹೋಮ, ಏಕದಶ ರುದ್ರಾಭಿಷೇಕ, ಸಾಮೂಹಿಕ ಮಹಾಮೃತ್ಯುಂಜಯ ಹೋಮ, ಮಹಾಪೂಜೆ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ, ಬೆಳಿಗ್ಗೆ 4 ಗಂಟೆಗೆ ಗಂಗಾ ಅವಭೃತ ಸ್ನಾನ, 7.30ಕ್ಕೆ ದೇವರ ನೃತ್ಯ ಬಲಿ, ಪ್ರಸಾದ ವಿತರಣೆ, ಶುದ್ಧಾ ಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ, ಸಂಜೆ 5ಕ್ಕೆ ಮಾಸ್ತಿಯಮ್ಮ ದೇವರ ಪೂಜೆ, ರಾತ್ರಿ 7.30ಕ್ಕೆ ದೇವರ ನೃತ್ಯ ಬಲಿ, ಗಂಧ ಪ್ರಸಾದ ವಿತರಣೆ, ಅನ್ನಸಂತರ್ಪಣೆ.

ತಾ. 23ರಂದು ಬೆಳಿಗ್ಗೆ 8 ಗಂಟೆಗೆ ದಂಡಿನ ಮಾರಿಯಮ್ಮ ದೇವರ ವಾರ್ಷಿಕ ಮಹಾಪೂಜೆ, ಮಧ್ಯಾಹ್ನ 12ಕ್ಕೆ ಮಾರಿಯಮ್ಮ ದೇವರ ಉತ್ಸವ, ಅನ್ನಸಂತರ್ಪಣೆ.

ತಾ. 24ರಂದು ಬೆಳಿಗ್ಗೆ 4 ಗಂಟೆಗೆ ದಂಡಿನ ಮಾರಿಯಮ್ಮ ದೇವರಿಗೆ ಹರಕೆ ಪೂಜೆ ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.