ಗುಡ್ಡೆಹೊಸೂರು, ಏ. 13: ಇಲ್ಲಿನ ಪಂಚಾಯಿತಿ ವ್ಯಾಪ್ತಿಯ ಬೂತ್‍ಮಟ್ಟದಲ್ಲಿ ಬಿ.ಜೆ.ಪಿ. ಕಾರ್ಯಕರ್ತರು ಪ್ರಚಾರ ನಡೆಸಿದರು. ಗುಡ್ಡೆಹೊಸೂರು ಬೂತ್ ಅಧ್ಯಕ್ಷ ಕೆದಂಬಾಡಿ ಗಿರೀಶ್ ಗುಡ್ಡೆಹೊಸೂರು ಭಾಗದಲ್ಲಿ ಪ್ರ್ರಚಾರ ನಡೆಸುತ್ತಿದ್ದಾರೆ. ಈ ತಂಡದಲ್ಲಿ ಗುಡ್ಡೆಹೊಸೂರು ಸ್ಥಾನೀಯ ಸಮಿತಿ ಅಧ್ಯಕ್ಷ ಮಂಡೆಪಂಡ ಉತ್ತಪ್ಪ ಹಾಜರಿದ್ದರು. ಬಸವನಹಳ್ಳಿ ಬೂತ್ ಅಧ್ಯಕ್ಷ ಮಂಡೆಪಂಡ ಮಾದಪ್ಪ ಮತ್ತು ತಾ.ಪಂ. ಸದಸ್ಯೆ ಪುಷ್ಪ, ಜಿ.ಪಂ. ಮಾಜಿ ಸದಸ್ಯೆ ಸುಲೋಚನ ಹಾಗೂ ಗ್ರಾ.ಪಂ. ಸದಸ್ಯರುಗಳಾದ ಡಾಟಿ, ಕವಿತಾ ಮುಂತಾದವರು ಹಾಜರಿದ್ದರು. ಮಾದಪಟ್ಟಣದ ಬೂತ್ ಅಧ್ಯಕ್ಷರುಗಳಾದ ಸುರೇಶ್ ಮತ್ತು ವೆಂಕಟೇಶ್ ಅವರುಗಳು ಆ ವಿಭಾಗದಲ್ಲಿ 2ನೇ ಸುತ್ತಿನ ಪ್ರಚಾರ ನಡೆಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪ್ರವೀಣ್, ಪುಷ್ಪ, ಬಸವರಾಜ್ ಮುಂತಾದವರು ಹಾಜರಿದ್ದರು.
ಬೊಳ್ಳುರು ಗ್ರಾಮದ ಬೂತ್ ಅಧ್ಯಕ್ಷ ಕುಡೆಕಲ್ಲು ನಿತ್ಯ ಅವರ ತಂಡ ಪ್ರಚಾರ ನಡೆಸಿತು. ಬೆಟ್ಟಗೇರಿ ಗ್ರಾಮದ ಅಧ್ಯಕ್ಷ ಐಲಪಂಡ ಕುಶಾಲಪ್ಪ ಮತ್ತು ತಂಡ ಈ ವಿಭಾಗದಲ್ಲಿ ಪ್ರಚಾರ ನಡೆಸಿತು. ಅತ್ತೂರು ಬೂತ್ ಅಧ್ಯಕ್ಷ ದೇವಪ್ಪ ಅವರು ಈ ವಿಭಾಗದಲ್ಲಿ ಪÀ್ರಚಾರ ನಡೆಸಿದರು. ಈ ಸಂದರ್ಭ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಬಿ.ಬಿ. ಭಾರತೀಶ್ ಹಾಜರಿದ್ದರು.