ನಾಪೆÉÇೀಕ್ಲು, ಏ. 11: ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲೆಯಲ್ಲಿ ಆಯೋಜಿಸಲಾದ ನಿರುದ್ಯೋಗ ವಿರುದ್ಧ ಯುವ ಜನರು ಜಾಗೃತಿ ಜಾಥಾದಲ್ಲಿ ನಾಪೆÉÇೀಕ್ಲು ನಗರದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಕೇರಳ ಸ್ಟೋಡೆಂಟ್ ಯೂನಿಯನ್ ಅಧ್ಯಕ್ಷ ಜೋಮನ್, ರಾಜ್ಯ ಜೆ.ಡಿ.ಎಸ್. ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಆಲಿ, ನಾಪೆÉÇೀಕ್ಲು ಬ್ಲಾಕ್ ಅಧ್ಯಕ್ಷ ರಮನಾಥ್ ಮಾತನಾಡಿ, ಜಿಲ್ಲೆಯ ಜನರು ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಮ್ಮಡ ಸೋಮಣ್ಣ, ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚೇಟಿರ ಕುಶು ಕುಶಾಲಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೇಯಂಡ ಸಾಬ ತಿಮ್ಮಯ್ಯ. ಹನೀಫ್, ಹಂಸ ಮತ್ತಿತರರು ಇದ್ದರು.