ಗೋಣಿಕೊಪ್ಪ ವರದಿ, ಏ. 11: ಮೈತ್ರಿ ಪಕ್ಷದ ಅಭ್ಯರ್ಥಿ ವಿಜಯಶಂಕರ್ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರ ಗೆಲವಿಗೆ ಶ್ರಮಿಸುವದಾಗಿ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಂತಿ ಅಚ್ಚಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳಷ್ಟು ಯೋಜನೆಗಳು ಮೈತ್ರಿ ಪಕ್ಷದ ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದಿವೆ ಎಂದರು. ಅಮ್ಮತ್ತಿ-ಕಾರ್ಮಾಡು ವ್ಯಾಪ್ತಿಯಲ್ಲಿ ಬಿಜೆಪಿ ಪ್ರಬಲ ಪಕ್ಷವಾಗಿದೆ. ಇಂತಹ ಪ್ರದೇಶದಲ್ಲಿ ತಮ್ಮದೇ ಕಾರ್ಯಕರ್ತರ ತಂಡದ ಮೂಲಕ ವಿಜಯಶಂಕರ್ ಗೆಲವಿಗೆ ಶ್ರಮಿಸುವದಾಗಿ ಜಯಮ್ಮ ಹೇಳಿದರು.
ಪಡಿಕಲ್ ಕುಸುಮಾವತಿ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಂತೆ. ಚುನಾವಣೆಯಲ್ಲಿ ಮೈತ್ರಿ ಪಕ್ಷಕ್ಕಾಗಿ ಒಂದಾಗಿ ಕಾರ್ಯ ನಿರ್ವಹಿಸಲಾಗುವದು ಎಂದರು.