ಶನಿವಾರಸಂತೆ, ಏ. 11: ಸಮೀದ ರಾಮನಹಳ್ಳಿ ಗ್ರಾಮದಲ್ಲಿರುವ ಪೈಸಾರಿ ಜಾಗವನ್ನು ಕಂದಾಯ ಇಲಾಖೆಯವರು ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಮೀಸಲಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಗ್ರಾಮಸ್ಥರು ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರಾದ ಪ್ರವೀಣ್ ಕುಮಾರ್, ಸೋಮಯ್ಯ, ರಂಗಶೆಟ್ಟಿ, ಸಣ್ಣಯ್ಯ, ಚಂದ್ರಪ್ಪ, ರಾಜು, ಯಶೋದಾ, ಶುಭಕರ್, ಸುಮಾ, ಕವಿತಾ, ಸುಮಿತ್ರಾ, ಮಂಜು, ಮನೋಜ್, ಮಂಜುನಾಥ್, ಮಣಿ ಇತರರು ಇದ್ದರು.