ಸೋಮವಾರಪೇಟೆ, ಏ.11: ಇಲ್ಲಿನ ಕುರುಹಿನಶೆಟ್ಟಿ ಸಮಾಜದ ಶ್ರೀ ರಾಮ ಮಂದಿರದಲ್ಲಿ ರಾಮನವಮಿ ಪ್ರಯುಕ್ತ ಕಳೆದ 6 ದಿನಗಳಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ.

8 ದಿನಗಳ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪ್ರತಿ ದಿನ ಬೆಳಿಗ್ಗೆ 7 ಗಂಟೆಗೆ ಅಭಿಷೇಕ ಮತ್ತು ಪೂಜೆ ಹಾಗೂ 9 ಗಂಟೆಗೆ ಮಹಾ ಮಂಗಳಾರತಿ, ಸಂಜೆ 6 ರಿಂದ 8 ರವರೆಗೆ ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಡೆಯುತ್ತಿವೆ.

ತಾ.13ರಂದು ಶ್ರೀ ರಾಮ ನವಮಿಯಂದು ಬೆಳ್ಳಿಗೆ 7 ರಿಂದ 10 ಗಂಟೆಯವರೆಗೆ ವಿಶೇಷ ಅಭಿಷೇಕ, ಅಲಂಕಾರ, ಪಾನಕ ಹಾಗೂ ಪ್ರಸಾದ ವಿತರಣೆ, ಸಂಜೆ 5ಗಂಟೆಗೆÉ ಶ್ರೀ ರಾಮ ದೇವರ ಉತ್ಸವ ಮೂರ್ತಿಗಳನ್ನು ಅಡ್ಡ ಪಲ್ಲಕ್ಕಿಯಲ್ಲಿ ಇಟ್ಟು, ಪಂಚವಾದ್ಯದೊಂದಿಗೆ ಊರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುವದು ಎಂದು ದೇವಾಲಯ ಸಮಿತಿ ಅಧ್ಯಕ್ಷರಾದ ಬಿ.ಎಸ್. ರಾಮಶೆಟ್ಟಿ ತಿಳಿಸಿದ್ದಾರೆ.

ಸಮುದಾಯ ಬಾಂಧವರಿಗೆ ಸಮಾಜದ ವತಿಯಿಂದ ತಾ. 14ರಂದು “ಹರಿಸೇವೆ’’ (ಪರ್ವ)ಯನ್ನು ನಡೆಸಲಾಗುವದು. ತಣ್ಣೀರುಹಳ್ಳ ಗ್ರಾಮದ ಬಿ.ಟಿ. ರಂಗಪ್ಪನವರ ಮನೆಯ ಆವರಣದಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಜನಾಂಗ ಬಾಂಧವರಿಗೆ ಅಂದು ಬೆಳ್ಳಿಗೆ 10.30 ಗಂಟೆಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ರಾಮಶೆಟ್ಟಿ ಮಾಹಿತಿ ನೀಡಿದ್ದಾರೆ.