ಕೆದಮುಳ್ಳೂರು, ಏ. 11: ಕೆದಮುಳ್ಳೂರಿನ ಶ್ರೀ ತೋರತಪ್ಪ ಆಂಜನೇಯ ದೇವಾಲಯ ಸಮಿತಿ ವತಿಯಿಂದ ತಾ. 14ರಂದು ಆಂಜನೇಯ ದೇವಸ್ಥಾನದಲ್ಲಿ ಬಿಸುಹಬ್ಬವನ್ನು ಆಚರಿಸಲಾಗುವದು. ಈ ಪ್ರಯುಕ್ತ ಅಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ, 9 ಗಂಟೆಗೆ ನವಕಳಶ, 11 ಗಂಟೆಗೆ ಎತ್ತುಪೋರಾಟ, 12.30ಕ್ಕೆ ಮಹಾಪೂಜೆ ಹಾಗೂ 1 ಗಂಟೆಗೆ ಅನ್ನಸಂತರ್ಪಣೆ ಜರುಗಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.