ಮಡಿಕೇರಿ, ಏ. 11: ಕರ್ನಾಟಕ ಹೆಚ್ಚುವರಿ ಪೊಲೀಸ್ ಮಹಾ ನಿರೀಕ್ಷಕ ಪ್ರತಾಪ್ ರೆಡ್ಡಿ ಅವರು ಇಂದು ಜಿಲ್ಲೆಗೆ ಭೇಟಿ ನೀಡುವ ಮೂಲಕ, ಚುನಾವಣಾ ಸುರಕ್ಷತಾ ಕ್ರಮಗಳ ಬಗ್ಗೆ ಖುದ್ದು ಪರಿಶೀಲಿಸಿದರು.

ರಾಜ್ಯದ ಆಂತರಿಕ ಭದ್ರತೆಯೊಂದಿಗೆ ನಕ್ಸಲ್ ನಿಗ್ರಹಪಡೆಯ ಮೇಲುಸ್ತುವಾರಿ ಹೊಂದಿರುವ ಎಡಿಜಿಪಿ ಜಿಲ್ಲೆಯ ಆರ್ಜಿ ಹಾಗೂ ಭಾಗಮಂಡಲದ ನಕ್ಸಲ್ ನಿಗ್ರಹ ಕಾರ್ಯಪಡೆ ಶಿಬಿರಗಳಿಗೆ ತೆರಳಿ ಖುದ್ದು ಪರಿಶೀಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರೊಂದಿಗೆ ಮುಂಜಾಗ್ರತಾ ಕ್ರಮಗಳ ಕುರಿತು ಸಮಾಲೋಚಿಸಿದ ಅವರು, ಚುನಾವಣೆ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಗಮನ ಹರಿಸುವಂತೆ ನಿರ್ದೇಶಿಸಿದರು. ಎಡಿಜಿಪಿಯೊಂದಿಗೆ ಎಸ್ಪಿ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.