ಸೋಮವಾರಪೇಟೆ,ಏ.11: ಕೊಡಗು ಜಿಲ್ಲಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಕೂಗೆಕೋಡಿಯ ಬಸವೇಶ್ವರ ಯುವಕ ಸಂಘದ ಆಶ್ರಯದಲ್ಲಿ ತಾ. 12ರಂದು (ಇಂದು) ಸಂಜೆ 6.30ಕ್ಕೆ ಕೂಗೆಕೋಡಿ ಗ್ರಾಮದ ಕನ್ನಂಬಾಡಿ ಅಮ್ಮ ದೇವಾಲಯದಲ್ಲಿ ಸುತ್ತೂರು ಜಗದ್ಗುರು ಶ್ರೀ ಗುರುಚನ್ನಬಸವ ಶಿವಾಚಾರ್ಯ ದತ್ತಿ ಉಪನ್ಯಾಸ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಮುದ್ದಿನಕಟ್ಟೆ ಮಠಾಧೀಶರಾದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಪಾಲ್ಗೊಂಡು ಆಶೀರ್ವಚನ ನೀಡಲಿದ್ದಾರೆ ಎಂದು ಪರಿಷತ್ನ ಕಾರ್ಯದರ್ಶಿ ಪ್ರೇಮನಾಥ್ ತಿಳಿಸಿದ್ದಾರೆ.