ಮಡಿಕೇರಿ, ಏ. 11: ಗೋಣಿಕೊಪ್ಪಲುವಿನ ಪಟೇಲ್ ನಗರ ನಿವಾಸಿ, ಎಲ್. ಅಯ್ಯಪ್ಪ ಎಂಬಾತನನ್ನು ಪೊಲೀಸ್ ಇಲಾಖೆಯ ಶಿಫಾರಸ್ಸು ಮೇರೆಗೆ ಇಂದು ಉಪವಿಭಾಗಾಧಿಕಾರಿ ಹಾಗೂ ಉಪ ದಂಡಾಧಿಕಾರಿ ಜಿಲ್ಲೆಯಿಂದ ಗಡಿಪಾರುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಲ್ಲಿನ ನಿವಾಸಿ ಲಕ್ಷ್ಮಣ ನಾಯಕ್ ಎಂಬವರ ಪುತ್ರನಾಗಿರುವ ಅಯ್ಯಪ್ಪ ಅಪರಾಧ ಹಿನ್ನೆಲೆಯ ಕಾರಣಕ್ಕಾಗಿ; ಚುನಾವಣೆ ಸಂದರ್ಭ ಶಾಂತಿ ಕಾಪಾಡುವ ನಿಟ್ಟಿನಲ್ಲಿ; ಇಂದಿನಿಂದ ಒಂದು ತಿಂಗಳು ಗಡಿಪಾರುಗೊಳಿಸಿ ಚಾಮರಾಜನಗರ ಜಿಲ್ಲೆ ಯಳಂದೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಕಳುಹಿಸಲಾಗಿದೆ.
ಅಲ್ಲಿ ಎರಡು ದಿನಗಳಿಗೊಮ್ಮೆ ಸಹಿ ಮಾಡುವದರೊಂದಿಗೆ ಪೊಲೀಸ್ ಠಾಣೆಯಲ್ಲಿ ತನ್ನ ಇರುವಿಕೆಗೆ ಖಾತರಿಪಡಿಸುವಂತೆ ದಂಡಾಧಿಕಾರಿ ಷರತ್ತು ವಿಧಿಸಿದ್ದಾರೆ ಎಂದು ಡಿವೈಎಸ್‍ಪಿ ನಾಗಪ್ಪ ಖಚಿತಪಡಿಸಿದ್ದಾರೆ.