ಶನಿವಾರಸಂತೆ, ಏ. 10: ಶನಿವಾರಸಂತೆ ಹೋಬಳಿ ಆಲೂರು ಹಾಗೂ ನಿಡ್ತ ಪಂಚಾಯಿತಿ ವ್ಯಾಪ್ತಿಯ ಬೂತ್ ಮಟ್ಟದ ಜೆ.ಡಿ.ಎಸ್. ಹಾಗೂ ಕಾಂಗ್ರೆಸ್ ಪಕ್ಷದ ಸಮನ್ವಯ ಸಮಿತಿ ಸಭೆ ಎಂ.ಎ. ಆದಿಲ್ ಪಾಶ ಹಾಗೂ ವಿ.ಪಿ. ಶಶಿಧರ್ ಅವರ ನೇತೃತ್ವದಲ್ಲಿ ಸ್ಥಳೀಯ ಸಭಾಂಗಣದಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ವಿ.ಪಿ. ಶಶಿಧರ್, ಜೆ.ಡಿ.ಎಸ್. ಹಾಗೂ ಕಾಂಗ್ರೆಸ್ ಅಭ್ಯರ್ಥಿಯ ಗೆಲವಿಗಾಗಿ ಶ್ರಮಿಸಬೇಕೆಂದು ಕರೆಕೊಟ್ಟರು.

ಎಂ.ಎ. ಆದಿಲ್ ಪಾಶ ಮಾತನಾಡಿ, ಕೊಡಗಿನ ಕಾಫಿ, ಮೆಣಸು, ಬೆಳೆಗಾರರ, ರೈತರ, ಕಾರ್ಮಿಕರ ಸ್ಥಿತಿ ಅಧೋಗತಿಗೆ ಇಳಿಯಲು ಸಂಸದರು ಪ್ರಾಮಾಣಿಕವಾಗಿ ಸ್ಪಂದಿಸಿಲ್ಲದ ಕಾರಣ ಎಂದರು. ಸಭೆಯಲ್ಲಿ ಪಾಪಣ್ಣ, ಡಿ.ಪಿ. ಭೋಜಪ್ಪ, ಮುತ್ತೇಗೌಡ, ರಾಜಪ್ಪ, ಲತಾ ದೇವರಾಜ್, ಕುಮಾರಸ್ವಾಮಿ, ಕೃಷ್ಣಮೂರ್ತಿ ಹಾಗೂ ಇತರರು ಹಾಜರಿದ್ದರು.