ಗೋಣಿಕೊಪ್ಪಲು. ಏ. 9: ಭಾರತೀಯ ಯುವ ಕಾಂಗ್ರೆಸ್ ಹಾಗೂ ಯುವ ಜಾತ್ಯತೀತ ಜನತಾದಳ ವತಿಯಿಂದ ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ಮೋದಿ ಯುವಜನ ವಿರೋಧಿ ವಾಹನ ಜಾಥಾ ನಡೆಯಿತು.
ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹನೀಫ್ ಸಂಪಾಜೆ ಮುಂದಾಳತ್ವದಲ್ಲಿ ನಡೆದ ವಾಹನ ಜಾಥಾ ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಅವಧಿಯಲ್ಲಿ ಜನತೆಗೆ ಆದ ತೊಂದರೆ, ಸಮಸ್ಯೆಗಳನ್ನು ವಿವರಿಸಿದರು. ಸಾಹಿತಿ ಎ.ಕೆ. ಹಿಮಾಕರ್ ಮಾತನಾಡಿ, ದೇಶಗಳಲ್ಲಿ ಈ ಬಾರಿ ಬದಲಾವಣೆ ಆಗಲಿದ್ದು ಮೋದಿ ಸರ್ಕಾರ ಕೊನೆಗೊಳ್ಳಲಿದೆ. ಮೈತ್ರಿ ಸರ್ಕಾರ ರಾಜ್ಯದಲ್ಲಿ ಬಡ ಜನತೆಯ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದೆ ಎಂದರು. ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್ ಪಕ್ಷದ ಮುಖಂಡರಾದ ಜೆ.ಕೆ.ಸೋಮಣ್ಣ, ಅಜಿತ್ ಅಯ್ಯಪ್ಪ, ಪಿ.ಕೆ.ಪೊನ್ನಪ್ಪ, ಶಾಜಿ ಅಚ್ಚುತ್ತನ್, ಮೂಕಳೇರ ಕುಶಾಲಪ್ಪ, ಧÀರ್ಮಜ, ಬಿ.ಎನ್.ಪ್ರಕಾಶ್, ಮೀದೆರಿರ ನವೀನ್, ಎ.ಜೆ.ಬಾಬು, ಅಬ್ದುಲ್ ಸಮ್ಮದ್, ಸಮೀರ್, ಸರ ಚಂಗಪ್ಪ, ರಾಜಶೇಖರ, ಪಿ.ಕೆ.ಪ್ರವೀಣ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ.ಆರ್.ಪಂಕಜ, ಶ್ರೀಜಾ ಶಾಜಿ ಅಚ್ಚುತ್ತನ್, ನಗರ ಕಾಂಗ್ರೆಸ್ ಅಧ್ಯಕ್ಷ, ಪ್ರಮೋದ್ ಗಣಪತಿ, ಯುವ ಕಾಂಗ್ರೆಸ್ ಪ್ರಮುಖರಾದ ರಕ್ಷಿತ್ ಚಂಗಪ್ಪ, ಮುತ್ತಣ್ಣ, ಲಾಲು ಸ್ಟಾಲಿನ್, ಅಂದಾಯಿ ಮುಂತಾದವರು ಹಾಜರಿದ್ದರು.