ಮಡಿಕೇರಿ, ಏ. 9: ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಮೂರನೇ ವಾರ್ಷಿ ಕೋತ್ಸವದ ಕಾರ್ಯಕ್ರಮ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಸಂಭ್ರಮದಿಂದ ಜರುಗಿತು. ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮ, ವಸ್ತು ಪ್ರದರ್ಶನ, ಮಾರಾಟ ಕೂಟದಿಂದ ಇದೇ ಪ್ರಥಮ ಬಾರಿಗೆ ಹೊರತರಲಾದ ಸ್ಮರಣ ಸಂಚಿಕೆ ಬಿಡುಗಡೆ, ಸ್ಪರ್ಧೆ ಹಾಗೂ ಸಾಂಸ್ಕøತಿಕ ರಂಗಿನೊಂದಿಗೆ ಕಾರ್ಯಕ್ರಮ ಜರುಗಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾ ಟಿಸಿದ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಅವರು ಮಹಿಳೆಯರೇ ಒಕ್ಕೂಟ ಸ್ಥಾಪಿಸಿ ಈ ರೀತಿಯ ಕಾರ್ಯಕ್ರಮ ಆಯೋಜಿಸು ತ್ತಿರುವದು ಸ್ವಾಗತಾರ್ಹ. ಮಹಿಳೆಯರು ಮುಖ್ಯವಾಗಿ ಮಕ್ಕಳಿಗೆ ಭಾಷೆಯ ಮೇಲೆ ಹಿಡಿತ ಬರುವಂತೆ ನೋಡಿಕೊಳ್ಳಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಅವರು ಮಾತನಾಡಿ, ಒಕ್ಕೂಟ ಸ್ಥಾಪನೆ ಹಾಗೂ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿಯಿತ್ತರು. ಮತ್ತೋರ್ವ ಅತಿಥಿ ಅಕಾಡೆಮಿ ಸದಸ್ಯೆ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ‘ಪೊಮ್ಮಾಲೆ’ ಸ್ಮರಣೆ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಬರಹಗಾರ್ತಿ ಕೂಪದಿರ ಸುಂದರಿ ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು.

ಅಪರಾಹ್ನ ಛದ್ಮವೇಷ, ಹಾಡುಗಾರಿಕೆ, ಪಿಕ್ ಅಂಡ್ ಆ್ಯಕ್ಟ್, ವಾಲಗತಾಟ್‍ನಂತಹ ಸ್ಪರ್ಧೆ ಯೊಂದಿಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮಹಿಳೆಯರು ಸಂಭ್ರಮದಿಂದ ಭಾಗಿಗಳಾಗಿದ್ದರು. ವಿವಿಧ ವೇಷ ಭೂಷಣ, ನಟನೆಯೊಂದಿಗೆ ಸ್ಪರ್ಧಿಗಳು ನೆರೆದಿದ್ದವರನ್ನು ರಂಜಿಸಿದರು. ಸುಮಾರು 200ಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದರು.

ಬೊಪ್ಪಂಡ ಸರಳಾ, ಅಜ್ಜಿನಿಕಂಡ ರಾಣಿ, ಚೊಟ್ಟೆರ ನಳಿನಿ ಪ್ರಾರ್ಥಿಸಿ, ಕೋಟೆರ ಮೀರಾ ಸ್ವಾಗತಿಸಿದರು. ಕೂಟದ ಕಾರ್ಯದರ್ಶಿ ಬೊಳ್ಳಜಿರ ಯಮುನಾ ಅಯ್ಯಪ್ಪ ವರದಿ ವಾಚಿಸಿ, ಖಜಾಂಚಿ ಉಳ್ಳಿಯಡ ಸಚಿತಾ ಗಂಗಮ್ಮ ಲೆಕ್ಕ ಪತ್ರ ಮಂಡಿಸಿದರು. ಚೋಕೀರ ಅನಿತಾ ಕಾರ್ಯಕ್ರಮ ನಿರೂಪಿಸಿ, ತೆನ್ನೀರ ರಾಧ ವಂದಿಸಿದರು. ಮಾದೇಟಿರ ಪ್ರಮೀಳಾ ತಂಡದಿಂದ ಸ್ವಾಗತ ಗೀತೆ, ಸುಬ್ರಹ್ಮಣ್ಯಕೇರಿ ಸದಸ್ಯರು ಹಾಗೂ ಒಕ್ಕೂಟದ ಸದಸ್ಯರಿಂದ ಗುಂಪು ನೃತ್ಯ ನಡೆಯಿತು. ಫ್ಯಾನ್ಸಿ ಮುತ್ತಣ್ಣ, ಶೋಭಾ ಸುಬ್ಬಯ್ಯ, ಅಜ್ಜೇಟಿರ ರಾಣಿ ಪಳಂಗಪ್ಪ, ತೆನ್ನೀರ ರಾಧ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.