ಶ್ರೀ ತಲಕಾವೇರಿ ಕ್ಷೇತ್ರದ ಅಗಸ್ತ್ಯೇಶ್ವರ ಸಾನಿಧ್ಯದಲ್ಲಿ ಪುನರ್‍ಪ್ರತಿಷ್ಟೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಿತು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಮೇಷರಾಶಿಯಲ್ಲಿ ಅಗಸ್ತ್ಯೇಶ್ವರ ಸಾನ್ನಿಧ್ಯದ ಪುನರ್‍ಪ್ರತಿಷ್ಠೆ ಕೈಗೊಳ್ಳ ಲಾಯಿತು. ಬಳಿಕ ಬ್ರಹ್ಮಕಲಶಾಭಿಷೇಕ ನೆರವೇರಿತು. (ಮೊದಲ ಪುಟದಿಂದ) ಮಹಾಪೂಜೆಯ ಬಳಿಕ ಭಕ್ತರಿಗೆ ಮಂತ್ರಾಕ್ಷತೆ ನೀಡಿ ಅನ್ನ ಸಂತರ್ಪಣೆ ನಡೆಯಿತು. ಭಾಗಮಂಡಲ ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು, ತಕ್ಕಮುಖ್ಯಸ್ಥರಾದ ಕೋಡಿ ಮೋಟಯ್ಯ, ಕಾರ್ಯನಿರ್ವಹಣಾಧಿಕಾರಿ ಜಗದೀಶ್‍ಕುಮಾರ್, ಪಾರುಪತ್ತೆಗಾರ ಕೊಂಡೀರ ಪೊನ್ನಣ್ಣ, ಪ್ರಮುಖರಾದ ಮಣವಟ್ಟೀರ ದೊರೆಸೋಮಣ್ಣ, ಪಿ.ಡಿ. ಪೊನ್ನಪ್ಪ, ತಮ್ಮುಪೂವಯ್ಯ, ಮಂದಪಂಡ ಸತೀಶ್, ಭಾಗಮಂಡಲ ವ್ಯಾಪ್ತಿಯ ನಾಲ್ಕುಗ್ರಾಮಗಳ ತಕ್ಕಮುಖ್ಯಸ್ಥರು ಪಾಲ್ಗೊಂಡಿದ್ದರು.