ಮಡಿಕೇರಿ, ಏ. 10: ಸಿದ್ದಾಪುರದ ಟೀಕ್‍ವುಡ್ ಎಸ್ಟೇಟ್‍ನಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ತಾ. 19 ರಂದು ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಾರ್ಷಿಕ ಪೂಜಾ ಉತ್ಸವ ನಡೆಯಲಿದೆ.

ತಾ. 19 ರಂದು ಬೆಳಿಗ್ಗೆ ಗಣಪತಿ ಹೋಮ, ಬಿಂಬಶುದ್ಧಿ, ಶುದ್ಧ ಕಲಶ, ಚಂಡಿಕಾಯಾಗ ಏರ್ಪಡಿಸಲಾಗಿದೆ. ಮಧ್ಯಾಹ್ನ ಪೂರ್ಣಾಹುತಿಯೊಂದಿಗೆ ಮಹಾಪೂಜೆ, ಪ್ರಸಾದ ವಿತರಣೆ ನೆರವೇರಲಿದೆ. ಸಂಜೆ ತ್ರಾಯಂಬಕ ಸೇವೆ, ಚಂಡೆ ವಾದ್ಯ, ರಂಗಪೂಜೆಯೊಂದಿಗೆ ಮಹಾಪೂಜೆ ಬಳಿಕ ಭರತನಾಟ್ಯ ಏರ್ಪಡಿಸಲಾಗಿದೆ.