ವೀರಾಜಪೇಟೆ, ಏ. 9: ಟೀಮ್ ಮೋದಿ ಸಂಘಟನೆ ವತಿಯಿಂದ ವೀರಾಜಪೇಟೆಯ ವಿವಿಧ ಗ್ರಾಮಗಳಿಂದ ಆಯ್ಕೆಯಾದ ಕಾರ್ಯಕರ್ತರಿಗೆ ಮೋದಿ ದೂತ್ ಗುರುತಿನ ಚೀಟಿಯನ್ನು ವಿತರಿಸಲಾಯಿತು.

ಟೀಮ್ ಮೋದಿಯ ಕೊಡಗು ಜಿಲ್ಲಾ ಸಂಚಾಲಕ ಕುಲದೀಪ್ ಪೂಣಚ್ಚ ನೇತೃತ್ವದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗುರುತಿನ ಚೀಟಿಯನ್ನು ವಿತರಿಸಲಾಯಿತು. ನಂತರ ಮಾತನಾಡಿದ ಅವರು ಎಲ್ಲಾ ಗ್ರಾಮಗಳಲ್ಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗುವಂತೆ ಮಾಡಲು ಕಾರ್ಯಕರ್ತರು ಶ್ರಮ ವಹಿಸಬೇಕೆಂದು ತಿಳಿಸಿದರು. ವೀರಾಜಪೇಟೆಯ ವಿವಿಧ ಗ್ರಾಮಗಳಿಂದ ಆಯ್ಕೆಯಾದ 28 ಕಾರ್ಯಕರ್ತರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ವೀರಾಜಪೇಟೆ ತಾಲೂಕು ಸಂಚಾಲಕ ಸಚಿನ್ ಮಂದಣ್ಣ, ಸಹ ಸಂಚಾಲಕ ಭರತ್, ಗೋಣಿಕೊಪ್ಪಲು ನಗರ ಸಂಚಾಲಕ ಕುಮಾರ್, ಮಂಜು ಮಾಯಮುಡಿ ಇನ್ನಿತರ ಕಾರ್ಯಕರ್ತರು ಹಾಜರಿದ್ದರು.