ಕೂಡಿಗೆ, ಏ. 9: ಪ್ರಥಮ ದರ್ಜೆ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕೂಡಿಗೆಯ ಚಂದನ್ ಶೆಟ್ಟಿ ಫ್ರೆಂಡ್ಸ್ ಸಮಿತಿಯು ಯುಗಾದಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕೊಡಗು ಜಿಲ್ಲಾಮಟ್ಟದ ಪ್ರಥಮ ವರ್ಷದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಕೂಡಿಗೆಯ ಡಯಟ್ ಮೈದಾನದಲ್ಲಿ ನಡೆಯಿತು.
ಪಂದ್ಯಾಟವನ್ನು ದೈಹಿಕ ಶಿಕ್ಷಕ ಡಾ. ಸದಾಶಿವಯ್ಯ ಎಸ್. ಪಲ್ಲೇದ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ರಾಜೇಗೌಡ, ಕೂಡಿಗೆಯ ಉದ್ಯಮಿ ಚಂದ್ರುಮೂಡ್ಲಿಗೌಡ, ಭಾಷಾ, ಅಶ್ರಫ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಇದ್ದರು.
ಕಬಡ್ಡಿ ಪಂದ್ಯಾಟದಲ್ಲಿ 10 ತಂಡಗಳು ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ಫ್ರೆಂಡ್ಸ್ ಚಂದ್ರ ತಂಡ, ಟೀಮ್ ಭಾರ್ಗವ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಕುಶಾಲನಗರದ ಅನುಗ್ರಹ ಕಾಲೇಜು ತಂಡ ತೃತೀಯ ಸ್ಥಾನ, ಚತುರ್ಥ ಸ್ಥಾನವನ್ನು ಮಡಿಕೇರಿಯ ಎಫ್ಎಂಸಿ ಕಾಲೇಜು ಪಡೆದುಕೊಂಡಿತು.
ಬೆಸ್ಟ್ ಆಲ್ ರೌಂಡರ್ ಆಗಿ ಸಂದೀಪ್, ಬೆಸ್ಟ್ ಕ್ಯಾಚರ್ ಗಣೇಶ್ ಪ್ರಶಸ್ತಿ ಪಡೆದುಕೊಂಡರು.