ಗೋಣಿಕೊಪ್ಪ ವರದಿ, ಏ. 9: ಕೋತೂರು ಶ್ರೀ ಮಾರಮ್ಮ ದೇವಸ್ಥಾನದ ವಾರ್ಷಿಕ ಹಬ್ಬ ತಾ. 18 ರಿಂದ ಮೇ 17 ರವರೆಗೆ ನಡೆಯಲಿದೆ ಎಂದು ಕೋತೂರು ಶ್ರೀ ಮಾರಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಡ್ಯಮಾಡ ಬೋಪಣ್ಣ ತಿಳಿಸಿದ್ದಾರೆ. ತಾ. 18 ರಂದು ದೇವಸ್ಥಾನದ ಬಾಗಿಲು ತೆರೆಯುವ ಕಾರ್ಯಕ್ರಮದ ಮೂಲಕ ಆರಂಭಗೊಂಡು ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಮೇ 17 ರಂದು ನಡೆಯುವ ಚಾಮುಂಡಿ ತೆರೆ ಮೂಲಕ ಸಂಪನ್ನಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾ. 18 ರಂದು ದೇವಸ್ಥಾನದ ಬಾಗಿಲು ತೆರೆಯುವದು ಹಾಗೂ ಕೊಂಡ ಹಾಯುವ ಕಾರ್ಯಕ್ರಮ, ತಾ. 18 ರಿಂದ ತಾ. 21 ರವರೆಗೆ ರಾತ್ರಿ ಹಬ್ಬ, ತಾ. 23 ರಂದು ಮಂದತವ್ವ ದೇವಿ ಹಬ್ಬಕ್ಕೆ ಕಟ್ಟು ಹಾಕುವದು, ತಾ. 30ಕ್ಕೆ ಮಾರಮ್ಮ ದೇವಿಯ ಜಳಕ, ಮೇ 7 ರಂದು ಮಾರಮ್ಮ ದೇವಿಯ ಕಾಟಿಹಾರ ನಮ್ಮೆ, ಮೇ 10 ರಂದು ಭದ್ರಕಾಳಿ ತೆರೆ, ಮೇ 14 ರಂದು ಭಗವತಿ ದೇವಿಯ ತೆರೆ, ಮೇ 17 ರಂದು ಚಾಮುಂಡಿ ದೇವಿಯ ತೆರೆ ಮೂಲಕ ಹಬ್ಬ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ದೇವಸ್ಥಾನ ಸಮಿತಿ ಉಪಾಧ್ಯಕ್ಷ ವಿ.ಟಿ. ರವೀಂದ್ರ, ಕಾರ್ಯದರ್ಶಿ ಒಕ್ಕಲಿಗರ ವಿನಯ್, ಸಲಹೆಗಾರ ವಿ.ಪಿ. ರವಿ ಹಾಗೂ ಊರುತಕ್ಕ ಮನ್ನಕಮನೆ ಈಶ್ವರ್ ಉಪಸ್ಥಿತರಿದ್ದರು.