ನಾಪೆÉÇೀಕ್ಲು, ಏ. 9: ಕ್ರೀಡೆಯಿಂದ ವ್ಯಕ್ತಿಯು ಉತ್ತಮ ಆರೋಗ್ಯವಂತನಾಗಿರಲು ಸಾಧ್ಯ ಎಂದು ಜಯಕರ್ನಾಟಕ ಸಂಘಟನೆಯ ಮಡಿಕೇರಿ ತಾಲೂಕು ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ ಅಭಿಪ್ರಾಯಪಟ್ಟರು. ಕಾವೇರಿ ಯೂತ್ ಕ್ಲಬ್ ವತಿಯಿಂದ ನಾಪೆÉÇೀಕ್ಲು ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾವೇರಿ ಯೂತ್ ಕ್ಲಬ್ ಅಧ್ಯಕ್ಷ ರಾಧಕೃಷ್ಣ ರೈ ಮಾತನಾಡಿ, ನಮ್ಮ ಸಂಘದ ವತಿಯಿಂದ 2ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು. ಪಂದ್ಯಾಟಕ್ಕೆ 32 ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಪಂದ್ಯಾಟದಲ್ಲಿ ಜಯಗಳಿಸಿದ ತಂಡಗಳಿಗೆ ನಗದು ಸೇರಿದಂತೆ ಆಕರ್ಷಕ ಟ್ರೋಫಿಯನ್ನು ನೀಡಲಾಗುವದು ಎಂದರು.
ವೇದಿಕೆಯಲ್ಲಿ ಹೊದವಾಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎ. ಹಂಸ, ಕ್ಲಬ್‍ನ ಖಜಾಂಚಿ ನಾಗರಾಜ್, ಯುವ ಮುಖಂಡ ಅಜ್ಜೆಟ್ಟಿರ ಮೋಹನ್ ಸೋಮಯ್ಯ, ಗಿರೀಶ್, ಪ್ರದೀಪ್ ಮತ್ತಿತರರು ಇದ್ದರು.