ಮಡಿಕೇರಿ, ಏ. 7: ಮಡಿಕೇರಿ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಅಖಿಲ ಭಾರತ ಬಿಲ್ಲವರ ಯೂನಿಯನ್ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಮಹಾಸಭೆ ಮತ್ತು ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣಾ ಸಮಾರಂಭ ಬಾಲಭವನದಲ್ಲಿ ನಡೆಯಿತು.
ಉದ್ಘಾಟನೆಯನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ನೆರವೇರಿಸಿದರು. ಅತಿಥಿಯಾಗಿ ಮಂಗಳೂರಿನ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಎನ್. ಸುಮಲತಾ ಸುವರ್ಣ ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ಮಡಿಕೇರಿ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಬಿ.ಎಂ. ರಾಜಶೇಖರ್ ವಹಿಸಿದ್ದರು.
ಮಡಿಕೇರಿ ತಾಲೂಕು ಸಂಘದ ಮುಂದಿನ ಸಾಲಿನ ಅಧ್ಯಕ್ಷರಾಗಿ ಬಿ.ಎಸ್. ಲೀಲಾವತಿ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ನೆರೆ ಸಂತ್ರಸ್ತರ ಪರಿಹಾರ ವಿತರಣೆಯಲ್ಲಿ ಸುಮಾರು 23 ಕುಟುಂಬಗಳಿಗೆ ತಲಾ ರೂ. 5 ಸಾವಿರಗಳಂತೆ ಚೆಕ್ ವಿತರಿಸಲಾಯಿತು.
ಗಾನವಿ ಸ್ವಾಗತಿಸಿ, ಬಿ.ಎಸ್. ಜಯಪ್ಪ ನಿರೂಪಿಸಿದರು. ಬಿ.ಕೆ. ಮಹೇಶ್ ವಂದಿಸಿದರು.