ಸೋಮವಾರಪೇಟೆ, ಏ. 7: ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಅಬಕಾರಿ ಇಲಾಖಾ ಸಿಬ್ಬಂದಿಗಳು, ಮಹಿಳೆಯೋರ್ವರನ್ನು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿದ್ದಾರೆ.

ತಾಲೂಕಿನ ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಸರವಳ್ಳಿ ಗ್ರಾಮದ ನೀಲಮ್ಮ ಎಂಬವರು ತಮ್ಮ ಮನೆ ಮತ್ತು ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಖಚಿತ ಸುಳಿವಿನ ಮೇರೆಗೆ ಅಬಕಾರಿ ಇಲಾಖಾಧಿಕಾರಿಗಳು ದಾಳಿ ನಡೆಸಿದ ಸಂದರ್ಭ ರೂ. 12,533 ಮೌಲ್ಯದ ವಿವಿಧ ಮದ್ಯದ ಪೊಟ್ಟಣಗಳು ಸಿಕ್ಕಿವೆ.

ಅಕ್ರಮ ಮದ್ಯ ಸಹಿತ ಆರೋಪಿ ನೀಲಮ್ಮ ಅವರನ್ನು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿದ ನಂತರ ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಎಲ್. ಮಧುಸೂದನ್, ಅಬಕಾರಿ ರಕ್ಷಕಿ ಕೆ.ವಿ. ಸುಮತಿ, ಸಿಬ್ಬಂದಿಗಳಾದ ಎನ್.ಬಿ. ವಿರೂಪಾಕ್ಷ, ಟಿ.ಕೆ. ಮನೋಹರ ಅವರುಗಳು ಭಾಗವಹಿಸಿದ್ದರು.