ದೇಶಿ ಧನುಷ್ ಫಿರಂಗಿ ಸಿದ್ಧ

ನವದೆಹಲಿ, ಏ. 7: ದೇಶದ ಮೊಟ್ಟ ಮೊದಲ ದೇಶಿ ನಿರ್ಮಿತ ಧನುಷ್ ಫಿರಂಗಿ ಭಾರತೀಯ ಸೇನೆಯನ್ನು ಸೇರ್ಪಡೆಗೊಳ್ಳಲು ಸಿದ್ಧಗೊಂಡಿದೆ. 155 ಎಂಎಂ/45 ಕ್ಯಾಲಿಬರ್ ಟವೆಡ್ ಗನ್ ಸಿಸ್ಟಮ್ ತಾ. 8 ರಂದು ಭಾರತೀಯ ಸೇನೆಯ ಭತ್ತಳಿಕೆಗೆ ಸೇರಲಿದೆ. ಈ ಬಗ್ಗೆ ಭಾರತೀಯ ಸೇನೆಯ ಸಾರ್ವಜನಿಕ ಮಾಹಿತಿ ವಿಭಾಗದ ಅಧಿಕಾರಿ ಟ್ವೀಟ್ ಮಾಡಿದ್ದಾರೆ. ಮೇಕ್ ಇನ್ ಇಂಡಿಯಾದ ಯೋಜನೆಯ ಭಾಗವಾಗಿ ತಯಾರಾಗಿರುವ ಧನುಷ್ ಫಿರಂಗಿಯನ್ನು ದೇಸಿ ಬೋಫೆÇೀರ್ಸ್ ಎಂದೇ ಹೇಳಲಾಗುತ್ತಿದ್ದು, 38 ಕಿ.ಮೀ.ವರೆಗೆ ಸ್ಟ್ರೈಕ್ ರೇಂಜ್‍ನ್ನು ಹೊಂದಿದೆ. ಧನುಷ್ ಫಿರಂಗಿ ಬೊಪೆÇೀರ್ಸ್ ಫಿರಂಗಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದ್ದು, ದಾಳಿ ನಡೆಸುವ ವ್ಯಾಪ್ತಿ 11 ಕಿ.ಮೀ.ವರೆಗೂ ಇದೆ. ಸಿಕ್ಕಿಂ, ಲೇಹ್ ನಂತಹ ಅತೀ ಶೀತ ಪ್ರದೇಶ ಹಾಗೂ ರಾಜಸ್ಥಾನದ ಪೆÇಖ್ರಾನ್, ಒಡಿಶಾ, ಬಾಲಾಸೋರ್ ನಂತಹ ಅತಿ ಬಿಸಿಲಿರುವ ಪ್ರದೇಶಗಳಲ್ಲೂ ಧನುಷ್ ಫಿರಂಗಿಯನ್ನು ಪರೀಕ್ಷಿಸಲಾಗಿದ್ದು, ಯಶಸ್ವಿ ಕಾರ್ಯಾಚರಣೆ ಬಳಿಕ ಸೇನೆಗೆ ಸೇರ್ಪಡೆಗೊಳಿಸಲಾಗುತ್ತಿದೆ.

ನಾಳೆಯಿಂದ ಮೋದಿ ಪ್ರಚಾರ ಆರಂಭ

ಬೆಂಗಳೂರು, ಏ. 7: ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಸಮಾವೇಶಗಳ ದಿನಾಂಕಗಳು ಅಂತಿಮಗೊಂಡಿವೆ. ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ನರೇಂದ್ರ ಮೋದಿ ಅವರ ಸಮಾವೇಶದ ಕುರಿತು ಮಾಹಿತಿ ನೀಡಿದರು. ತಾ. 9 ರಂದು ಚಿತ್ರದುರ್ಗ, ಮೈಸೂರು, ತಾ. 12 ರಂದು ಗಂಗಾವತಿ, ತಾ. 13 ರಂದು ಬೆಂಗಳೂರು, ತಾ. 18 ರಂದು ಚಿಕ್ಕೋಡಿ, ಬಾಗಲಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಅವರು ಹೇಳಿದರು. ತಾ. 13 ರಂದು ಬೆಂಗಳೂರಿಗೆ ಆಗಮಿಸುವ ನರೇಂದ್ರ ಮೋದಿ ಅವರು ಬೆಂಗಳೂರು ದಕ್ಷಿಣ, ಬೆಂಗಳೂರು, ಉತ್ತರ ಉತ್ತರ, ಕೇಂದ್ರ ಹಾಗೂ ಗ್ರಾಮಾತರ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು.

ವಿಜಯ ಪ್ರಕಾಶ್ ತಂದೆ ನಿಧನ

ಮೈಸೂರು, ಏ. 7: ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್‍ಗೆ ಪಿತೃ ವಿಯೋಗವಾಗಿದೆ. ವಿಜಯ್ ಪ್ರಕಾಶ್ ಅವರ ತಂದೆ ಎಲ್. ರಾಮಶೇಷು (75) ವಯೋಸಹಜ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ. ಭಾನುವಾರ ಬೆಳಿಗ್ಗೆ ಅವರು ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವದಾಗಿ ವಿಜಯ್ ಪ್ರಕಾಶ್ ಕುಟುಂಬ ಮೂಲಗಳು ಹೇಳಿದೆ. ರಾಮಶೇಷು, ವಿದ್ವಾನ್ ರಾಮಶೇಷು ಎಂದೇ ಖ್ಯಾತವಾಗಿದ್ದ ಇವರು ತಮ್ಮ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಗಾಯಕ ವಿಜಯ್ ಪ್ರಕಾಶ್ ಈಗ ಅಮೇರಿಕಾ ಪ್ರವಾಸದಲ್ಲಿದ್ದು ವಿಷಯ ತಿಳಿದು ಭಾರತಕ್ಕೆ ಹಿಂದಿರುಗುತ್ತಿದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ನಡೆಯಲಿದೆ ಎಂದು ಕುಟುಬ ಸದಸ್ಯರು ಹೇಳಿದ್ದಾರೆ.