ಮಡಿಕೇರಿ, ಏ. 7: ಭಾರತೀಯ ಸನಾತನ ಪರಂಪರೆಯಂತೆ ಜಿಲ್ಲೆಯ ಎಲ್ಲೆಡೆ ಹೊಸ ವರುಷದ ಹರುಷವನ್ನು ಬೇವು ಹಾಗೂ ಬೆಲ್ಲವನ್ನು ಸವಿಯುವ ಮೂಲಕ ಜನತೆ ಸಂಭ್ರಮಿಸಿದರು. ಹೊಸ ವರುಷದ ಹರುಷವನ್ನು ವಿಶೇಷ ಪೂಜೆ, ಪಂಚಾಂಗ ಶ್ರವಣ ಸಹಿತ ಸಿಹಿಯೂಟದೊಂದಿಗೆ ಆನಂದಿಸುವ ಮೂಲಕ ಬದುಕಿನಲ್ಲಿ ಎದುರಾಗ ಲಿರುವ ಕಷ್ಟ- ಸುಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕಲ್ಪಗೈದರು. ಮಡಿಕೇರಿ ಸುದರ್ಶನ ಅತಿಥಿಗೃಹದ ಬಳಿ ಇರುವ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಯುಗಾದಿ ಪ್ರಯುಕ್ತ ಪೂಜೆ, ಅನ್ನಸಂತರ್ಪಣೆ ನಡೆಯಿತು.
ಜಿಲ್ಲೆಯ ದೇವಾಲಯಗಳಲ್ಲಿ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆಯೊಂದಿಗೆ ಬಿಸಿಲಿನ ತಾಪ ದೂರವಾಗಿ ವರುಣ ತಂಪೆರೆಯಲೆಂದು ಇಷ್ಟದೇವರಲ್ಲಿ ಭಜಿಸಿದರು.
ಸೋಮವಾರಪೇಟೆ
ಹೊಸ ವರ್ಷ ಯುಗಾದಿಯನ್ನು ಸೋಮವಾರಪೇಟೆ ಭಾಗದಲ್ಲಿ ಸಂಭ್ರಮ ಸಡಗರದಿಂದ ಆಚರಿ¸ Àಲಾಯಿತು. ಪ್ರತಿ ದೇವಾಲಯಗಳಲ್ಲಿ ದಿನದ ಅಂಗವಾಗಿ ವಿಶೇಷ ಪೂಜೆಗಳು ನಡೆದವು.
ಮನೆಮನೆಗಳಲ್ಲೂ ಯುಗಾದಿಯ ಸಂಭ್ರಮ ಕಂಡುಬಂತು. ಬೇವು ಬೆಲ್ಲವನ್ನು ಸವಿಯುವ ಮೂಲಕ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಇಲ್ಲಿನ ಶ್ರೀ ಸೋಮೇಶ್ವರ, ಬಸವೇಶ್ವರ, ಅಯ್ಯಪ್ಪ ಮತ್ತು ಮುತ್ತಪ್ಪ ದೇವಾಲಯ, ಬಜೆಗುಂಡಿಯ ಅಯ್ಯಪ್ಪ ದೇವಾಲಯ, ಯಡೂರಿನ ಸೋಮೇಶ್ವರ ದೇವಾಲಯ, ಗೌಡಳ್ಳಿಯ ದುರ್ಗಾಪರಮೇಶ್ವರಿ ದೇವಾಲಯ, ಹಾನಗಲ್ಲು ಗಣಪತಿ ದೇವಾಲಯ ಸೇರಿದಂತೆ ಇತರ ದೇವಸ್ಥಾನಗಳಲ್ಲಿ ಯುಗಾದಿ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು.
ಅರಶಿನಕುಪ್ಪೆಯಲ್ಲಿ: ತಾಲೂಕಿನ ಅರಸಿನಕುಪ್ಪೆ ಸಿದ್ದಲಿಂಗಪುರದಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದಲ್ಲಿ ಯುಗಾದಿ ಉತ್ಸವ ಅರ್ಥಪೂರ್ಣ ವಾಗಿ ನಡೆಯಿತು. ಮಂಜುನಾಥನ ಸನ್ನಿಧಿಯಲ್ಲಿ ಅಷ್ಟದ್ರವ್ಯ ಸಹಿತ ಗಣಪತಿ ಹೋಮ, ಕಲಶಾಭಿಷೇಕ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ವಿಶೇಷ ಅಲಂಕಾರ ಸೇವೆ, ಅನ್ನ ಪೂರ್ಣೇಶ್ವರಿ, ಮಂಜುನಾಥ, ಜ್ವಾಲಾಮಹಮ್ಮಾಯಿ, ನಾಗದೇವರು, ಕಾಲಭೈರವೇಶ್ವರನಿಗೆ ಸಂಕಲ್ಪಪೂಜೆ, ಮಹಾಮಂಗಳಾರತಿ, ಅನ್ನಸಂತರ್ಪ ಣೆಗಳು ನೆರವೇರಿದವು.
ಯುಗಾದಿಯ ಮಾರನೇ ದಿನದಂದು ಕುಶಾಲನಗರದ ವಾಸವಿ ಯುವ ಜನ ಸಂಘದಿಂದ ವಿಶೇಷ ಪೂಜಾಕಾರ್ಯ, ಅನ್ನದಾನ, ಭಜನಾ ಕಾರ್ಯಗಳು ನಡೆದವು.
ದೇವಾಲಯದ ಗುರುಗಳಾದ ಶ್ರೀರಾಜೇಶ್‍ನಾಥ್ ಗುರೂಜಿ, ಅರ್ಚಕರುಗಳಾದ ಜಗದೀಶ್ ಉಡುಪ, ವಾದಿರಾಜ್ ಭಟ್, ಮಣಿಕಂಠನ್ ನಂಬೂದರಿ, ಕಿರಣ್ ಅವರುಗಳ ಪೌರೋಹಿತ್ವದಲ್ಲಿ ಹೋಮ, ಪೂಜೆಗಳು ನಡೆದವು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ, ಗೌರವಾಧ್ಯಕ್ಷ ನಾಪಂಡ ಮುದ್ದಪ್ಪ, ಪ್ರಮುಖರಾದ ಕಿಶೋರ್‍ಕುಮಾರ್ ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಪೂಜಾ ಕಾರ್ಯದಲ್ಲಿ ಭಾಗಿಯಾಗಿ ದ್ದರು.
ಕಲ್ಕಂದೂರಿನಲ್ಲಿ: ಸಮೀಪದ ಕಲ್ಕಂದೂರು ಗ್ರಾಮದ ಶ್ರೀ ಶಾಸ್ತ ಯುವಕ ಸಂಘದಿಂದ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಯುಗಾದಿ ಉತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಯುವಕ ಸಂಘದ ಅಧ್ಯಕ್ಷ ಲೋಕೇಶ್, ಪದಾಧಿಕಾರಿ ಗಳಾದ ಹರೀಶ್, ಶಿವಕುಮಾರ್, ನರೇಂದ್ರ, ಸುರೇಶ್, ಉದಯ, ಕುಮಾರ್, ಅನಿಲ್, ಮಹೇಶ್, ದೀಕ್ಷಿತ್, ಕಲ್ಕಂದೂರು ಗ್ರಾಮ ಸಮಿತಿಯ ರಂಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೆಬ್ಬಾಲೆ
ಸೋಮವಾರಪೇಟೆ ತಾಲೂಕಿನ ಗಡಿಗ್ರಾಮಗಳಾದ ತೊರೆನೂರು, ಶಿರಂಗಾಲ ಗ್ರಾಮಗಳಲ್ಲಿ ಯುಗಾದಿ ಹಬ್ಬದ ಅಂಗವಾಗಿ ರೈತರು ಹೊನ್ನಾರು ಉತ್ಸವ ಆಚರಿಸಿ ಸಂಭ್ರಮಿಸಿದರು. ರೈತರು ತಮ್ಮ ಜಾನುವಾರುಗಳನ್ನು ನದಿಯಲ್ಲಿ ಸ್ನಾನ ಮಾಡಿಸಿ ನಂತರ ಅಲಂಕರಿಸಿ ಗ್ರಾಮದಲ್ಲಿ ಹೊನ್ನಾರು ಉತ್ಸವದ ಮೆರವಣಿಗೆ ನಡೆಸಿದರು. ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೊದಲಿಗೆ ಗ್ರಾಮದ ರೈತ ಟಿ.ಜಿ.ರಮೇಶ್ ಎಂಬುವರು ಮೊದಲಿಗೆ ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿ ತಮ್ಮ ಜಾನುವಾರುಗಳ ಮೂಲಕ ಹೊನ್ನಾರು ಉಳುಮೆ (ಚಿನ್ನದ ಉಳುಮೆ) ಆರಂಭಿಸಿದರು. ಮೆರವಣಿಗೆ ನಂತರ ರೈತರು ತಮ್ಮ ತಮ್ಮ ಜಮೀನಿನಲ್ಲಿ ಚಿನ್ನದ ಮೊದಲ ಉಳುಮೆ ಆರಂಭಿಸಿದರು. ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ಕೆ.ಪಾಂಡುರಂಗ, ಕಾರ್ಯದರ್ಶಿ ಟಿ.ಎಚ್. ಸೋಮಚಾರಿ, ಮುಖಂಡ ರಾದ ಟಿ.ಬಿ.ಜಗದೀಶ್, ಟಿ.ಸಿ. ಶಿವಕುಮಾರ್, ಟಿ.ಎಸ್. ತೋಂಟೇಶ್ ಇತರರು ಇದ್ದರು.
ಶಿರಂಗಾಲದಲ್ಲಿ ಆಚರಣೆ : ಶಿರಂಗಾಲ ಶ್ರೀ ಮಂಟಿಗಮ್ಮ ಗ್ರಾಮ ದೇವತಾ ಸಮಿತಿ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ಹೊನ್ಮಾರು ಉತ್ಸವ ಆಚರಿಸಲಾಯಿತು. ದನಗಳಿಗೆ ಅಲಂಕಾರ ಮಾಡಿ ಊರಿನಲ್ಲಿ ಮೆರವಣಿಗೆ ನಡೆಸಿದರು. ಗ್ರಾಮದ ಕೋಟೆ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸಾಗಿ ಮೊದಲಿಗೆ ದೇವಾಲಯ ಜಾಗದಲ್ಲಿ ಉಳುಮೆ ಮಾಡಿದರು. ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಕಾರ್ಯದರ್ಶಿ ಸಿ.ಎನ್. ಲೋಕೇಶ್ ಮತ್ತು ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.
ಕೂಡಿಗೆ
ಇಲ್ಲಿನ ಬಸವೇಶ್ವರ ಮತ್ತು ದಂಡಿನಮ್ಮ ದೇವಾಲಯ ಸಮಿತಿಯ ವತಿಯಿಂದ ಯುಗಾದಿ ಹಬ್ಬ ದೇವಾಲಯದ ಆವರಣದಲ್ಲಿ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆಯೊಂದಿಗೆ ನಡೆದವು. ಮೊದಲು ದೇವಾಲಯ ಆವರಣದಿಂದ ವಾದ್ಯಗೋಷ್ಠಿಯೊಂದಿಗೆ ಕಾವೇರಿ ನದಿಗೆ ತೆರಳಿ ಬಸವೇಶ್ವರ ದೇವರ ವಿಗ್ರಹಕ್ಕೆ ತೀರ್ಥ ಸ್ನಾನ ಬಳಿಕ ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೂಜಾ ಕಾರ್ಯಕ್ರಮ ನಡೆದವು. ಸಂಪ್ರದಾಯ ದಂತೆ ದೇವಾಲಯ ಆವರಣದಲ್ಲಿ ಪಂಚಾಂಗದ ಪಠಣ ನಡೆಯಿತು. ಈ ಸಂಧರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಕೆ. ಸೋಮಶೇಖರ್, ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು. ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಆವರಣದಲ್ಲಿ ವಿಶೇಷ ಪೂಜಾ ಕಾರ್ಯ ನಡೆದವು.
.