ಭಾಗಮಂಡಲ, ಏ. 7: ತಲಕಾವೇರಿ ಕ್ಷೇತ್ರದ ಅಗಸ್ತ್ಯೇಶ್ವರ ಸಾನ್ನಿಧ್ಯದಲ್ಲಿ ಪುನರ್‍ಪ್ರತಿಷ್ಠೆ ಅಷ್ಟಬಂಧ ಬಹ್ಮಕಲಶದ ಅಂಗವಾಗಿ ಭಾನುವಾರ ವಿವಿಧ ಕಾರ್ಯಕ್ರಮಗಳು ನಡೆದವು. ದೇವಾಲಯದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಅಂಕುರಪೂಜೆ, ಹಾಗೂ ಶಾಂತಿ ಹೋಮಗಳು ನೆರವೇರಿದವು. ಸಂಜೆ ಅಂಕುರ ಪೂಜೆ ದುರ್ಗಾ ನಮಸ್ಕಾರ ಪೂಜೆ ಹಾಗೂ ಮಂಟಪ ಸಂಸ್ಕಾರ ಜರುಗಿತು.

ಸೋಮವಾರ ಗಣಪತಿ ಹೋಮ, ತ್ರಿಕಾಲಪೂಜೆ, ಅಂಕುರಪೂಜೆ, ತತ್ವಕಲಶ ಪೂಜೆ, ಅನುಜ್ಞಾ ಕಲಶಾಭಿಷೇಕ, ಪೂಜೆಗಳು ಜರುಗಲಿವೆ. ಸಂಜೆ ತ್ರಿಕಾಲ ಪೂಜೆ ಹಾಗೂ ಅಂಕುರ ಪೂಜೆಗಳು ಜರುಗಲಿವೆ. ಪೂಜಾ ಕಾರ್ಯದ ಸಂದರ್ಭ ಶ್ರೀ ಭಗಂಡೇಶ್ವರ - ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ, ಕಾರ್ಯನಿರ್ವಹಕಾಧಿಕಾರಿ ಎಂ. ಜಗದೀಶ್‍ಕುಮಾರ್, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು. ಬ್ರಹ್ಮಕಲಶೋತ್ಸವದ ಅಂಗವಾಗಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.