ಮಡಿಕೇರಿ, ಏ. 5: ಇಲ್ಲಿನ ಶ್ರೀ ಸುಬ್ರಹ್ಮಣ್ಯ - ಮುತ್ತಪ್ಪ ಕ್ಷೇತ್ರದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಸಂಬಂಧ ಈ ಸಂಜೆ ನಗರದ ಮುಖ್ಯ ಬೀದಿಗಳಲ್ಲಿ ಸಾಂಸ್ಕøತಿಕ ಕಲಾ ತಂಡಗಳೊಂದಿಗೆ ದೇವರ ಉತ್ಸವ ಮೂರ್ತಿಯ ವೈಭವದ ಮೆರವಣಿಗೆ ನಡೆಯಿತು. ಗಾಂಧಿ ಮೈದಾನಕ್ಕೆ ನಗರದ ನಾಲ್ಕು ದಿಕ್ಕಿನಿಂದ ಸಂಗಮ ಗೊಂಡ ಕಲಶ ಸಹಿತ ಮೆರವಣಿಗೆ ಯಲ್ಲಿ ಕೇರಳದ ಚಂಡೆ ವಾದ್ಯ ಮೋದಕಲಶದ ಆಕರ್ಷಣೆ ಯೊಂದಿಗೆ ಕಲಾ ತಂಡಗಳು ಭಾಗವಹಿಸಿದ್ದವು.ಕೋಟೆಬೆಟ್ಟ ಈಶ್ವರ ಕೂತಂಡ ದಿಂದ ‘ದುಡಿಪಾಟ್’ ಸಹಿತ ಕಲಶಗಳು ಹಾಗೂ ತಾಲಾಪೋಲಿ ಮೆರವಣಿಗೆಗೆ ಇನ್ನಷ್ಟು ಮೆರಗು ನೀಡಿತು. ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿದ ಈ ಶೋಭಾಯಾತ್ರೆಯು ರಾತ್ರಿ ಸನ್ನಿಧಿಯಲ್ಲಿ ಸಂಪನ್ನಗೊಂಡಿತು. ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿಸ್ಪರ್ಶದೊಂದಿಗೆ ಪೊವ್ವೋದಿ, ವಿಷ್ಣುಮೂರ್ತಿ ವೆಳ್ಳಾಟಂ, ಶಿವಭೂತ ತೆರೆ, ಗುಳಿಗ, ಕುಟ್ಟಿಚಾತನ್, ಮುತ್ತಪ್ಪ, ತಿರುವಪ್ಪ ತೆರೆ, ಪೊವ್ವೋದಿ ತೆರೆಯೊಂದಿಗೆ ತಾ. 6ರಂದು ಬೆಳಗ್ಗಿನ ಜಾವ ದೇವರ ಬಾರಣಿ ಬಳಿಕ ಧ್ವಜ ಅವರೋಹಣದೊಂದಿಗೆ ವಾರ್ಷಿಕ ಉತ್ಸವ (ಮೊದಲ ಪುಟದಿಂದ) ಮುಕ್ತಾಯಗೊಳ್ಳುವಂತಾ ಯಿತು. ರಾತ್ರಿಯಿಡೀ ದೇವತಾ ಕೈಂಕರ್ಯ ಮುಂದುವರಿದಿತ್ತು.
ಇಂದು ನಡೆದ ಉತ್ಸವ ಮೆರವಣಿಗೆಯಲ್ಲಿ ದೇವಾಲಯ ಸಮಿತಿ ಪದಾಧಿಕಾರಿಗಳಾದ ಟಿ.ಕೆ. ಸುಧೀರ್, ಟಿ.ಎಸ್. ಪ್ರಕಾಶ್, ಉಣ್ಣಿಕೃಷ್ಣ, ಶಾರದಾ ರಾಮನ್, ಸುರೇಶ್, ಸದಾಶಿವ, ಆರ್. ಗಿರೀಶ್, ಎಂ.ಕೆ. ರಾಘವನ್ ಸೇರಿದಂತೆ ಅನೇಕ ಮುಖಂಡರು ಸಮಾಜದ ವನಿತೆಯರು, ಮಕ್ಕಳು, ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.