ಮಡಿಕೇರಿ, ಏ. 5: ರಾಜಕೀಯ ಪಕ್ಷಗಳು ತಮ್ಮ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ರಾಜಕಾರ ಣಕ್ಕಾಗಿ ಬಳಸಿಕೊಳ್ಳುತ್ತಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಆರೋಪಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ಮುಂದಿನ ದಿನಗಳಲ್ಲಿ ದಸಂಸ ಸಮಾನ ಮನಸ್ಕರೊಂದಿಗೆ ಒಗ್ಗೂಡಿ ರಾಜಕೀಯ ಪ್ರವೇಶ ಮಾಡಲಿದೆ ಎಂದು ಪ್ರಕಟಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ದ.ಸಂ.ಸ. ರಾಜಕೀಯ ರಹಿತವಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಈ ಹಿಂದೆ ರಾಜಕೀಯವಾಗಿ ಬಿಎಸ್‍ಪಿ ಯನ್ನು ನಮ್ಮ ಪಕ್ಷವೆಂದು ಪರಿಗಣಿಸಿ ಕೆಲಸ ಕಾರ್ಯಗಳನ್ನು ಮಾಡಿ ಕೊಂಡು ಬಂದಿದೆ. ಆದರೆ, ಪಕ್ಷದÀ ನಾಯಕರಲ್ಲೇ ಒಮ್ಮತ ಇಲ್ಲದಿರುವ ಹಿನ್ನೆಲೆ ಅಸಮಾಧಾನಗೊಂಡು ಸಂಘಟನೆ ಬಿಎಸ್‍ಪಿಯಿಂದ ಹೊರ ಬಂದಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿಯನ್ನು ರಾಜಕೀಯ ರಹಿತವಾಗಿ ಬೆಳೆಸಲಾಗಿದ್ದು, ಸುಮಾರು ಎಂಟು ಸಾವಿರ ಸದಸ್ಯರುಗಳಿದ್ದಾರೆ. ಕೊಡಗಿನಲ್ಲಿ 1.05 ಲಕ್ಷದಷ್ಟು ದಲಿತ ಸಮೂಹವಿದ್ದು, ಯಾವದೇ ರಾಜಕೀಯ ಪಕ್ಷವನ್ನು ಗೆಲ್ಲಿಸುವ ಅಥವಾ ಸೋಲಿಸುವ ಸಾಮಥ್ರ್ಯ ಸಂಘಟನೆಗೆ ಇದೆ. ಆದರೂ ಎಲ್ಲಾ ರಾಷ್ಟ್ರೀಯ ಪಕ್ಷಗಳು ದಲಿತರನ್ನು ಕಡೆಗಣಿಸಿ ತಮ್ಮ ವೋಟ್ ಬ್ಯಾಂಕ್ ಆಗಿ ಮಾತ್ರ ಬಳಸಿಕೊಳ್ಳುತ್ತಿವೆ ಎಂದು ದಿವಾಕರ್ ದೂರಿದರು.
ಜಿಲ್ಲೆಯಲ್ಲಿ ಯಾವದೇ ಪಕ್ಷದಲ್ಲೂ ದಲಿತ ನಾಯಕರಿಗೆ ಉತ್ತಮವಾದ ಸ್ಥಾನಮಾನವನ್ನು ನೀಡಿಲ್ಲ. ಪದಾಧಿಕಾರಿಗಳನ್ನಾಗಿ ಮಾಡಿದ್ದರೂ ಸಭೆ-ಸಮಾರಂಭಗಳ ವೇದಿಕೆಯಲ್ಲಿ ಅವರನ್ನು ವೇದಿಕೆಗೆ ಆಹ್ವಾನಿಸದೆ ಕಡೆಗಣಿಸಲಾಗುತ್ತಿದೆ. ಪಕ್ಷದ ಪ್ರಮುಖ ಸ್ಥಾನ ಮತ್ತು ಅಧಿಕಾರ ಕೇವಲ ಕೆಲವೇ ಸಮುದಾಯದ ಪಾಲಾಗುತ್ತಿದೆ ಎಂದು ಟೀಕಿಸಿದರು.
ಜಿಲ್ಲೆಯಲ್ಲಿ ಮನೆ, ನಿವೇಶನ ರಹಿತ ಸುಮಾರು 3 ಸಾವಿರಕ್ಕೂ ಅಧಿಕ ದಲಿತರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿದ್ದರು ಯಾವದೇ ರಾಜಕೀಯ ಪಕ್ಷಗಳು ಇದಕ್ಕೆ ಸ್ಪಂದನ ನೀಡಿಲ್ಲ. ಸಂಘಟನೆಯಿಂದ ನಡೆಸಿದ ಹೋರಾಟಗಳಿಗೂ ಜಿಲ್ಲಾಡಳಿತ ದಿಂದಲೂ ಸೂಕ್ತ ಸ್ಪಂದನೆ ದೊರ ಕುತ್ತಿಲ್ಲ. ನಮ್ಮ ಕೆಲಸ ಕಾರ್ಯಗಳು ನಡೆಯುವ ಹಂತದಲ್ಲಿ ಜಿಲ್ಲಾಧಿಕಾರಿ ಗಳ ವರ್ಗಾವಣೆಯಂತಹ ಪ್ರಕ್ರಿಯೆಗಳು ನಡೆದು ಬಿಡುತ್ತದೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಡಿಕೇರಿ ತಾಲೂಕು ಸಂಘಟನಾ ಸಂಚಾಲಕ ದೀಪಕ್ ಮಾತನಾಡಿ, ಜಿಲ್ಲೆಯಲ್ಲಿ ಎಸ್‍ಸಿ-ಎಸ್‍ಟಿ ನಿಗಮದಲ್ಲಿ ಹಲವಾರು ಯೋಜನೆಗಳು ದಲಿತರಿಗೆ ಮೀಸಲಾ ಗಿದ್ದರೂ, ಕೇವಲ ಬೆರಳೆಣಿಕೆಯ ಮಂದಿಗೆ ಮಾತ್ರ ಇದು ತಲಪುತ್ತಿದೆ. ಆಯ್ಕೆ ಸಮಿತಿಯಲ್ಲಿ ಶಾಸಕರುಗಳೇ ಇರುವದರಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವವರಿಗೆ ಮಾತ್ರ ಸೌಲಭ್ಯಗಳು ದೊರಕುತ್ತಿದೆ ಎಂದು ಆರೋಪಿಸಿದರು. ದಸಂಸ ವತಿಯಿಂದ ಹಲವಾರು ಅರ್ಜಿಗಳನ್ನು ನೀಡಲಾಗಿದ್ದರೂ ಯಾವದನ್ನು ನಿಗಮದಲ್ಲಿ ಪರಿಗಣಿಸಿಲ್ಲ ಎಂದು ದೂರಿದರಲ್ಲದೆ, ಮುಂದಿನ ದಿನಗಳಲ್ಲಿ ಆಯ್ಕೆ ಸಮಿತಿಯಿಂದ ಶಾಸಕರುಗಳನ್ನು ಹೊರಗಿಟ್ಟು ಜಿಲ್ಲಾಧಿಕಾರಿಗಳ ಮೂಲಕ ಫಲಾನುಭವಿಗಳ ಆಯ್ಕೆ ಮಾಡುವಂತೆ ಆಗ್ರಹಿಸಿದರು.
ಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಹೆಚ್.ಎಲ್. ಕುಮಾರ್, ನಗರ ಸಂಚಾಲಕ ಸಿ.ಪಿ. ಸಿದ್ದೇಶ್ವರ ಹಾಗೂ ಸದಸ್ಯ ಚಂದ್ರು ಉಪಸ್ಥಿತರಿದ್ದರು.