ವೀರಾಜಪೇಟೆ, ಏ. 5: ಚುನಾವಣಾ ರಂಗದ ಬಿಸಿ ತಾರಕಕ್ಕೇರಿದ್ದು ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಮತ ನೀಡುವಂತೆ ಪ್ರಚಾರ ಮಾಡಿದರು. ನಗರ ನಿವಾಸಿಗಳಲ್ಲಿ ಭಾ.ಜ.ಪ. ಅಭ್ಯರ್ಥಿಯ ಪರ ಮತಯಾಚನೆ ಮಾಡಲಾಯಿತು
ವೀರಾಜಪೇಟೆ ನಗರದಲ್ಲಿ ಸಂತೆ ದಿನವಾದ ಬುಧವಾರ ಭಾರತೀಯ ಜನತಾ ಪಕ್ಷದ ವತಿಯಿಂದ ಕೊಡಗು-ಮೈಸೂರು ಲೊಕಸಭಾ ಕ್ಷೇತ್ರದ ಅಭ್ಯರ್ಥಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಪರ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೊಪ್ಪಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಮತಯಾಚನೆ ಮಾಡಿದರು.
ಬೆಳಿಗ್ಗೆ ತೆಲುಗರ ಬೀದಿಯಿಂದ ಆರಂಭವಾದ ಮತಯಾಚನೆಯು ಮುಖ್ಯ ರಸ್ತೆಗಳಲ್ಲಿ ಸಾಗಿ ಖಾಸಗಿ ಬಸ್ ನಿಲ್ದಾಣ ತರಕಾರಿ ಮಾರುಕಟ್ಟೆ, ಮೀನುಪೇಟೆ ವಾರ್ಡ್‍ಗಳಲ್ಲಿ ಮತಯಾಚನೆÀ್ನಡೆಯಿತು.
ವೀರಾಜಪೇಟೆ ತಾಲೂಕು ಭಾ.ಜ.ಪ. ಅಧ್ಯಕ್ಷ ಅರುಣ್ ಭೀಮಯ್ಯ, ಮಾಜಿ ಜಿಲ್ಲಾ ಪರಿಷತ್ ಆದ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಅರ್.ಎಂ.ಸಿ. ಅಧ್ಯಕ್ಷ ಸುವಿನ್ ಗಣಪತಿ, ಜಿಲ್ಲಾ ಪರಿಷತ್ ಸದಸ್ಯರು, ತಾಲೂಕು ಪಂಚಾಯಿತಿ ಸದಸ್ಯರು, ಪಟ್ಟಣ ಪಂಚಾಯಿತಿ ಸದಸ್ಯರು, ನಗರ ಘಟಕದ ಸದಸ್ಯರು, ಸಂಘ ಪರಿವಾರದ ಸದಸ್ಯರು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.