ಮಡಿಕೇರಿ, ಏ. 5: ತಾ. 4 ರಂದು ಮೂರ್ನಾಡು ವಲಯದ ಕಾಂಗ್ರೆಸ್ ಅಧ್ಯಕ್ಷ ಪೊನ್ನು ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಉಪಸ್ಥಿತರಿದ್ದರು.

ಸಭೆಯಲ್ಲಿ ಡಿಸಿಸಿ ಸದಸ್ಯರಾದ ವಜೀರ್, ಗ್ರಾಮ ಪಂಚಾಯಿತಿ ಸದಸ್ಯರು ಮೀನಾಕ್ಷಿ ಕೇಶವ, ಮಾಜಿ ಅಧ್ಯಕ್ಷ ಮುಂದಂಡ ಬಾಗೇಶ್, ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾದ ವೆಂಕಟೇಶ್, ಮಡಿಕೇರಿ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ಯಾಟ್ರಿಕ್ ಲೋಬೋ ಹಾಗೂ ಬ್ಲಾಕ್ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಎಂ.ಎ. ಮುನೀರ್ ಮಾಚಾರ್, ವಲಯ ಉಪಾಧ್ಯಕ್ಷ ಶಿವು, ಹೀರ, ಸುಬ್ಬಯ್ಯ, ರಘು, ಬೈರ, ಎಂ.ಪಿ. ಪ್ರಕಾಶ್, ಗಣಪತಿ, ಸುಬ್ಬಯ್ಯ, ಅಬ್ದುಲ್ ಖಾದರ್, ಶಿವಕುಮಾರ್, ನಯಾಸ್, ಲೀಲಾವತಿ ಹಾಜರಿದ್ದರು. ವಂದನಾರ್ಪಣೆಯನ್ನು ಸೈಫ್ ಯುವ ಕಾಂಗ್ರೆಸ್ ಅಧ್ಯಕ್ಷರು ಮಾಡಿದರು.