*ಸಿದ್ದಾಪುರ, ಏ. 4: ಮನೆಯ ಸಮೀಪ ನೆಟ್ಟು ಬೆಳೆಸಿದ್ದ ಶ್ರೀಗಂಧದ ಮರವನ್ನು ಕಳವು ಮಾಡಿರುವ ಘಟನೆ ನಿನ್ನೆ ನಡುರಾತ್ರಿ ವೇಳೆಯಲ್ಲಿ ಸಂಭವಿಸಿದೆ. ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಗ್ರಾಮ ನಿವಾಸಿ, ಅಂಚೆÀಮನೆ ವಿಶ್ವನಾಥ್ ಅವರು ತಮ್ಮ ಮನೆಯ ಗೇಟ್ ಸಮೀಪ 2 ಗಂಧದ ಗಿಡಗಳನ್ನು ತಂದು ನೆಟ್ಟು ಬೆಳೆಸಿದ್ದರು. ಕಳೆದ ವರ್ಷ ಹುತ್ತರಿ ಹಬ್ಬದಂದು ಕಳ್ಳರು ಒಂದು ಮರವನ್ನು ಕದ್ದೊಯ್ದಿದ್ದರು. ಇದೀಗ ನಿನ್ನೆ ಮಧ್ಯರಾತ್ರಿ ಇನ್ನೊಂದು ಮರವನ್ನು ಕೂಡ ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಮೀನುಕೊಲ್ಲಿ ಮೀಸಲು ಅರಣ್ಯ ಇಲಾಖಾ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.