ಗೋಣಿಕೊಪ್ಪ ವರದಿ, ಏ. 4: ಮಾಯಮುಡಿ ಗ್ರಾಮದ ಕಮಟೆ ಮಹಾದೇಶ್ವರ ದೇವಸ್ಥಾನದಲ್ಲಿ ತಾ. 6 ರಂದು ಯುಗಾದಿ ಪ್ರಯುಕ್ತ ಹಲವು ಪೂಜಾಕಾರ್ಯಗಳು ನಡೆಯಲಿವೆ. ಅಂದು ಬೆಳಗ್ಗೆ 10 ಗಂಟೆಯಿಂದ ಸಾಮೂಹಿಕ ಗಣಪತಿ ಹೋಮ, ಸತ್ಯನರಾಯಣಪೂಜೆ, ಈಶ್ವರನಿಗೆ ರುದ್ರಾಭಿಷೇಕ ನಡೆಯಲಿದೆ.