ಸೋಮವಾರಪೇಟೆ, ಏ. 4: ಇಲ್ಲಿನ ಜೆಸಿಐ ಸೋಮವಾರಪೇಟೆ ಪುಷ್ಪಗಿರಿಯ ಜೇಸಿರೇಟ್ಸ್ ವಿಭಾಗದಿಂದ ಸ್ಥಳೀಯ ಮಹಿಳಾ ಸಮಾಜದಲ್ಲಿ ಮಹಿಳಾ ದಿನಾಚರಣೆ ಮತ್ತು ಐವರು ಸಾಧಕರಿಗೆ ಜೇಸೀ ಪಂಚರತ್ನ ಪುರಸ್ಕಾರ ವಿತರಣಾ ಸಮಾರಂಭ ನಡೆಯಿತು.

ಮಹಿಳಾ ಸಮಾಜದ ಅಧ್ಯಕ್ಷೆ ಗಾಯತ್ರಿ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೇಸೀ ಸಂಸ್ಥೆಯು ಹತ್ತು ಹಲವು ಸಮಾಜ ಮುಖಿ ಕಾರ್ಯಕ್ರಮ ಹಮ್ಮಿಕೊಳ್ಳು ತ್ತಿದ್ದು, ನಾಯಕತ್ವದ ಗುಣಗಳೊಂದಿಗೆ ಸಮಾಜಸೇವೆಯ ಮನೋಭಾವನೆ ಯನ್ನು ಮೂಡಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸೀರೇಟ್ ಅಧ್ಯಕ್ಷೆ ಸುಮಲತ ಪುರುಷೋತ್ತಮ್ ವಹಿಸಿ ಮಾತನಾಡಿ, ಮಹಿಳೆಯರು ಇಂದು ಎಲ್ಲಾ ರಂಗದಲ್ಲೂ ಸಾಧನೆ ತೋರುತ್ತಿರುವದು ಶ್ಲಾಘನೀಯ.

ಮಹಿಳೆಯರ ಸಬಲೀಕರಣಕ್ಕೆ ಸರ್ಕಾರಗಳೂ ಸಹ ಹಲವಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದ ಸೇವೆಗಾಗಿ ಬಾಣಾವರದ ಜಯಮ್ಮ ಅವರಿಗೆ ಕೃಷಿ ರತ್ನ ಪುರಸ್ಕಾರ, ಶಿಕ್ಷಣ ಕ್ಷೇತ್ರದಿಂದ ಮದಲಾಪುರದ ಹೆಚ್.ಎಸ್. ಸುಜಾತ ಅವರಿಗೆ ವಿದ್ಯಾ ರತ್ನ ಪುರಸ್ಕಾರ, ಕ್ರೀಡಾ ಕ್ಷೇತ್ರದಿಂದ ಸೋಮವಾರಪೇಟೆಯ ಭಾಗ್ಯ ಅವರಿಗೆ ಖೇಲ್ ರತ್ನ ಪುರಸ್ಕಾರ, ಉದ್ಯಮ ಕ್ಷೇತ್ರದಿಂದ ಯಡೂರಿನ ಸತ್ಯಪ್ರೇಮ ಅವರಿಗೆ ನಾಟಿ ವೈದ್ಯ ರತ್ನ ಪುರಸ್ಕಾರ, ಸಾಮಾಜಿಕ ಸೇವಾ ಕ್ಷೇತ್ರದಿಂದ ಕೂತಿ ಗ್ರಾಮದ ದೇವಕಿ ಅವರಿಗೆ ಮಾನವತಾ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಜೇಸೀ ಸಂಸ್ಥೆಯ ನಿರ್ದೇಶಕಿ ಶೋಭಾ ಯಶ್ವಂತ್, ಉಪನ್ಯಾಸಕಿ ಅನುಪಮ, ಜೇಸೀ ಸಂಸ್ಥೆಯ ತಮನ್ನ, ಮಾಯಾ ಗಿರೀಶ್, ಪುರುಷೋತ್ತಮ್, ಜೇಸಿರೇಟ್ ಕಾರ್ಯದರ್ಶಿ ವಿದ್ಯಾ ಸೋಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.