ಮಡಿಕೇರಿ, ಏ.4 : ಕಕ್ಕಬ್ಬೆ ಸಮೀಪದ ಕುಂಜಿಲ ಗ್ರಾಮದ ವಯಕೋಲ್ ಎಂಬಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಪುಳಿಂಙÉೂೀಂ ವಲಿಯುಲ್ಲ ಅವರ ಹೆಸರಿನಲ್ಲಿ ಉರೂಸ್ ಸಮಾರಂಭ ತಾ.6 ಮತ್ತು 7 ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವಯಕೋಲ್ ಮಸೀದಿಯ ಸಹಕಾರ್ಯದರ್ಶಿ ವಿ.ಎ.ಸಿರಾಜುದ್ದೀನ್ ತಾ. 6 ರಂದು ಮಗ್ರಿಬ್ ನಮಾಜ್ನ ನಂತರ ಮಸೀದಿ ಅಧ್ಯಕ್ಷ ವಿ.ಎ. ಅಬ್ದುಲ್ ಹಮೀದ್ ಹಾಗೂ ಉಪಾಧ್ಯಕ್ಷ ವಿ.ಇ. ರಷೀದ್ ಅವರುಗಳು ಧ್ವಜಾರೋಹಣ ನಡೆಸುವ ಮೂಲಕ ಉರೂಸ್ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ಬಳಿಕ ಪುಳಿಂಙÉೂೀಂ ಔಲಿಯಾಗಳ ಭಂಡಾರವನ್ನು ಸದಸ್ಯ ವಿ.ಎ. ಆಲಿ ಅವರು ಇರಿಸಲಿದ್ದು, ರಾತ್ರಿ 8 ಗಂಟೆಗೆ ಕಣ್ಣೂರಿನ ಫಾಳಿಲಿ ಲುಕ್ಮಾನ್ ಹಕೀಂ ಅವರು ‘ಕುಟುಂಬ ಜೀವಿದಂ’ ವಿಷಯದ ಕುರಿತು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮವನ್ನು ವಯಕೋಲ್ ಆರ್ಯು ಮದ್ರಸದ ಅಧ್ಯಾಪಕ ಅಶ್ರಫ್ ಸಖಾಫಿ ಉದ್ಘಾಟಿಸಲಿದ್ದಾರೆ.
ತಾ.7 ರಂದು ನಿವೃತ್ತ ಪೊಲೀಸ್ ಅಧಿಕಾರಿ ವಿ.ಎ. ಮೂಸ ಅವರು ಪುಳಿಂಙÉೂೀಂ ಔಲಿಯಾಗಳ ಭಂಡಾರ ಇಳಿಸಲಿದ್ದು, ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭವನ್ನು ಪಯನೆರಿ ಖತೀಬ ಮುಬಶಿರ್ ಅಹ್ಸನಿ ಉದ್ಘಾಟಿಸಲಿದ್ದಾರೆ. ಪಯನೆರಿ ಜಮಾಅತ್ ಅಧ್ಯಕ್ಷ ಎ.ಎ. ಮಹಮ್ಮದ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕೊಲ್ಲಂನ ಅಲ್ ಹಫೀಝ್ ಮಾಹಿನ್ ಮನ್ನಾನಿ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಅಂದು ಸಂಜೆ ಮೌಲೂದ್ ಪಾರಾಯಣ ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಸ್ಜಿದುರ್ರಹ್ಮಾನ್, ಅಧ್ಯಕ್ಷ ವಿ.ಎಂ.ಹಮೀದ್, ಉಪಾಧ್ಯಕ್ಷ ವಿ.ಇ. ರಷೀದ್ ಹಾಗೂ ಸದಸ್ಯ ಮೆಹಮೂದ್ ಉಪಸ್ಥಿತರಿದ್ದರು.