ಸೋಮವಾರಪೇಟೆ, ಏ.4: ಇಲ್ಲಿನ ವಿರಕ್ತ ಮಠದ ಕಾಫಿ ತೋಟದಲ್ಲ್ಲಿ ಸಂಗ್ರಹಿಸಿಟ್ಟಿದ್ದ ಸೌದೆಗೆ ಆಕಸ್ಮಿಕ ಬೆಂಕಿ ಬಿದ್ದು, ಸಾವಿರಾರ ರೂ. ಬೆಲೆಬಾಳುವ ಸೌದೆ ಬೆಂಕಿಗಾಹುತಿಯಾಯಿತು.
ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಬೆಂಕಿ ನಂದಿಸುವ ಸಂದರ್ಭ ಅಗ್ನಿಶಾಮಕ ಠಾಣೆಯ ಅಧಿಕಾರಿ ಲವ, ಕೌಶಿಕ್ ಎಂ.ಜೆ, ಲಕ್ಷ್ಮೀಕುಮಾರ್, ಚೇತನ್, ಪ್ರಕಾಶ್ ಮತ್ತಿತರರು ಇದ್ದರು.