ಮಡಿಕೇರಿ, ಏ. 2: ಇಲ್ಲಿನ ಶ್ರೀ ಸುಬ್ರಹ್ಮಣ್ಯಸ್ವಾಮಿ-ಶ್ರೀ ಮುತ್ತಪ್ಪ ಸ್ವಾಮಿ ಕ್ಷೇತ್ರದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರೆ ಮತ್ತು ದೈವ ಕೋಲಗಳ ಉತ್ಸವಕ್ಕೆ ಇಂದು ಸಂಜೆ ಚಾಲನೆ ದೊರೆಯಿತು.
ದೇವಾಲಯದ ಆವರಣದಲ್ಲಿಂದು ಸಂಜೆ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ರೇಡಿಯೋ ಡಯಾಗ್ನೋಸಿಸ್ ತಜ್ಞ ಡಾ. ಚೌರಿರ ಶ್ಯಾಂ ಅಪ್ಪಣ್ಣ, ಉದ್ಯಮಿ ತೇನನ ರಾಜೇಶ್ ಸೋಮಣ್ಣ, ಶಸ್ತ್ರ ಚಿಕಿತ್ಸಕ ಡಾ. ಮನೋಹರ್ ಜಿ. ಪಾಟ್ಕರ್, ಬೆಳೆಗಾರ ಟಿ.ಆರ್. ವಾಸುದೇವ, ಗುತ್ತಿಗೆದಾರ ಜಿ. ಕಿಶೋರ್ ಬಾಬು, ಉದ್ಯಮಿ ಎಂ.ಎ. ಹಮೀದ್, ಚೌಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಗಜಾನನ, ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್, ಪ್ರಧಾನ ಕಾರ್ಯದರ್ಶಿ ಟಿ.ಎಸ್. ಪ್ರಕಾಶ್, ಕಾರ್ಯಾಧ್ಯಕ್ಷ ಎನ್.ವಿ. ಉಣ್ಣಿಕೃಷ್ಣ, ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಉತ್ಸವ ತಾ. 6ರ ವರೆಗೆ ನಡೆಯಲಿದೆ.