ಗೋಣಿಕೊಪ್ಪ ವರದಿ, ಏ. 2: ಕಾಕೋಟುಪರಂಬು ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ. 14 ರಿಂದ ಹಾಕಿ ಕೂರ್ಗ್ ಆಯೋಜಿಸಲಿರುವ ಕೂರ್ಗ್ ಹಾಕಿ ಚಾಂಪಿಯನ್‍ಶಿಪ್ ಟೂರ್ನಿಗೆ ಈಗಾಗಲೇ 108 ತಂಡಗಳು ನೋಂದಾಯಿಸಿ ಕೊಂಡಿದ್ದು, ಮತ್ತಷ್ಟು ತಂಡಗಳು ಪಾಲ್ಗೊಳ್ಳಲು ತಾ. 10 ರವರೆಗೆ ನೋಂದಣಿಗೆ ಅವಕಾಶ ನೀಡಲಾಗಿದೆ ಎಂದು ಹಾಕಿ ಕೂರ್ಗ್ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 9483394515, 9535546955 ಸಂಖ್ಯೆಯನ್ನು ಸಂಪಕಿಸಬಹುದಾಗಿದೆ.