ಮಡಿಕೇರಿ, ಏ. 2: ದಿ. ಕೇಶವ ಪೆರಾಜೆ ಮಾಸ್ತರ್ ಅವರ ನೆನಪಿನಲ್ಲಿ ಆರಂಭವಾಗಿರುವ ಪೆರಾಜೆಯ ಪಯಸ್ವಿನಿ ಬಳಗದಿಂದ ಮೊದಲ ಕಾರ್ಯಕ್ರಮವಾಗಿ ಪೆರಾಜೆ ಗ್ರಾಮದ ಶಾಲಾ ಮಕ್ಕಳಿಗೆ ತಾ. 3 ರಿಂದ (ಇಂದಿನಿಂದ) ತಾ 7ರ ವರೆಗೆ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ.

ಪೆರಾಜೆಯ ಜ್ಯೋತಿ ಪ್ರೌಢಶಾಲೆಯಲ್ಲಿ ಆರನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾ. 3 ರಂದು ನಡೆಯುವ ಕಾರ್ಯಕ್ರಮವನ್ನು ಜ್ಯೋತಿ ಪ್ರೌಢಶಾಲೆಯ ಸಂಚಾಲಕ ಹರಿಶ್ಚಂದ್ರ ಮುಡ್ಕಜೆ ಉದ್ಘಾಟಿಸಲಿದ್ದು, ಮುಖ್ಯೋಪಾಧ್ಯಾಯ ಪುರುಷೋತ್ತಮ ಅಧ್ಯಕ್ಷತೆ ವಹಿಸಲಿದ್ದಾರೆ.

ರಮೇಶ ಮೆಟ್ಟಿನಡ್ಕ ಅವರಿಂದ ಹಾಡು, ಕುಣಿತ, ತಾ. 4ರಂದು ಡಾ. ಅನುರಾಧ ಕುರುಂಜಿ ಹಾಗೂ ಚಂದ್ರಶೇಖರ ಬಿಳಿನೆಲೆ ಅವರಿಂದ ಕಸದಿಂದ ರಸ, ತಾ. 5ರಂದು ವೆಂಕಟರಾಮ ಭಟ್ ಅವರಿಂದ ಮೋಜಿನ ಗಣಿತ, ತಾ. 6ರಂದು ಧನಂಜಯ ಮರ್ಕಂಜ ಅವರಿಂದ ಕ್ಲೇ ಮಾಡೆಲಿಂಗ್, ತಾ. 7ರಂದು ರವೀಂದ್ರನಾಥ ಐತಾಳ ಅವರಿಂದ ಹಾವು-ನಾವು ಕಾರ್ಯಕ್ರಮ ನಡೆಯಲಿದೆ. ಅಂದು ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಪೆರಾಜೆ ಗ್ರಾಪಂ ಪಿಡಿಒ ಮಹಾದೇವ ಪ್ರಭು, ಸುಳ್ಯ ಎನ್‍ಎಂಸಿ ಕನ್ನಡ ವಿಭಾಗ ಉಪನ್ಯಾಸಕಿ ಡಾ. ಅನುರಾಂಧ ಕುರುಂಜಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.